Ad imageAd image

ಹುಡುಗ, ಅವಿವಾಹಿತ ಹುಡುಗಿಯ ಮೇಲೆ ಬಣ್ಣ,ಬಣ್ಣದ ನೀರೆರಚುತ್ತಾನೋ ಅವರಿಬ್ಬರ ನಡುವೆ ವಿವಾಹ!!

Bharath Vaibhav
ಹುಡುಗ, ಅವಿವಾಹಿತ ಹುಡುಗಿಯ ಮೇಲೆ ಬಣ್ಣ,ಬಣ್ಣದ ನೀರೆರಚುತ್ತಾನೋ ಅವರಿಬ್ಬರ ನಡುವೆ ವಿವಾಹ!!
WhatsApp Group Join Now
Telegram Group Join Now

ರಾಂಚಿ(ಜಾರ್ಖಂಡ್​): ಇಲ್ಲಿನ ಬುಡಕಟ್ಟು ಜನಾಂಗದವರಿಗೆ ಹೋಳಿ ಹಬ್ಬ ಬಹಳ ವಿಶೇಷ. ಅದರಲ್ಲೂ ಯುವತಿಯರಿಗೆ ಈ ದಿನ ಬಂತೆಂದರೆ ಸಂತಸಕ್ಕಿಂತ ಆತಂಕವೇ ಜಾಸ್ತಿ. ಏಕೆಂದರೆ, ಇಂದು ಯಾವ ಹುಡುಗ ಯಾವ ಅವಿವಾಹಿತ ಹುಡುಗಿಯ ಮೇಲೆ ಬಣ್ಣ ಅಥವಾ ಬಣ್ಣದ ನೀರೆರಚುತ್ತಾನೋ ಅವರಿಬ್ಬರ ನಡುವೆ ವಿವಾಹ ನಡೆಯುತ್ತದೆ ಎಂದರ್ಥ!. ಆದರೆ ಯುವತಿ ಆ ಯುವಕನನ್ನು ಒಪ್ಪಿದರೆ ಮಾತ್ರ. ತಿರಸ್ಕರಿಸಿದರೆ ದಂಡ ಹಾಕಲಾಗುತ್ತದೆ. ಇದು ಜಾರ್ಖಂಡ್‌ನ ಬುಡಕಟ್ಟು ಜನಾಂಗದ ವಿಶೇಷ ಹೋಳಿ ಆಚರಣೆ.

ಬನಾರಸ್ ಪಂಚಾಂಗ್ ಅಥವಾ ಮಿಥಿಲಾ ಪಂಚಾಂಗ್ ಪ್ರಕಾರ, ಜಾರ್ಖಂಡ್‌ನ ಬುಡಕಟ್ಟು ಜನಾಂಗದವರಲ್ಲಿ ಈ ರೀತಿ ಹೋಳಿ ಆಚರಿಸಲಾಗುತ್ತದೆ.

ರಾಂಚಿಯ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ವಿಶ್ವವಿದ್ಯಾಲಯದ ಸಂತಾಲ್ ಭಾಷೆಯ ಸಹಾಯಕ ಪ್ರಾಧ್ಯಾಪಕಿ ದುಮ್ನಿ ಮಾಯ್ ಮುರ್ಮು ಅವರು ಹೇಳುವಂತೆ, ಬುಡಕಟ್ಟು ಜನಾಂಗದವರು ನೀರನ್ನೇ ಎಲ್ಲಾ ಬಣ್ಣಗಳ ಸಂಯೋಜನೆ ಎಂದು ನಂಬುತ್ತಾರೆ. ಹಾಗಾಗಿ ಇವರು ನೀರೆರಚುವ ಮೂಲಕ ಹೋಳಿ ಆಚರಿಸುತ್ತಾರೆ. ಆದರೆ ಯುವಕ ಯುವತಿಗೆ ಬಣ್ಣವನ್ನು ಹಚ್ಚಿದರೆ ಅಥವಾ ಬಣ್ಣ ಮಿಶ್ರಿತ ನೀರನ್ನು ಹಾಕಿದರೆ ಅವರಿಬ್ಬರ ನಡುವೆ ಮದುವೆ ಎಂದರ್ಥ. ಹಾಗೆಯೇ ಇಲ್ಲಿಯ ಇನ್ನೊಂದು ನಂಬಿಕೆ ಅವಿವಾಹಿತ ಹುಡುಗಿಯ ಹಣೆಯ ಮೇಲೆ ಇಟ್ಟಿಗೆಯ ಧೂಳು ಬಿದ್ದರೆ, ಅದು ಮಹಿಳೆಯರಲ್ಲಿ ಮದುವೆಯ ಸಂಕೇತವಾದ ಸಿಂಧೂರಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ.

ಯುವತಿ ತಿರಸ್ಕರಿಸಿದರೆ ಶಿಕ್ಷೆ: ಆದರೆ ಹೋಳಿ ಬಣ್ಣದ ನೀರನ್ನೆರಚುವ ಆಚರಣೆಯನ್ನು ಸಂಬಂಧ ನೋಡಿಕೊಂಡು ಆಡಲಾಗುತ್ತದೆ. ಉದಾಹರಣೆಗೆ, ಗಂಡ-ಹೆಂಡತಿ ಪರಸ್ಪರ ಹೋಳಿ ಆಡಬಹುದು. ಸಹೋದರ ಮತ್ತು ಸಹೋದರಿಯರು ಆಡುವಂತಿಲ್ಲ. ಯುವಕ ಅವಿವಾಹಿತ ಹುಡುಗಿಗೆ ಬಣ್ಣ ಅಥವಾ ಬಣ್ಣದ ನೀರನ್ನು ಹಾಕಿದರೆ ಆಕೆ ಅದೇ ವ್ಯಕ್ತಿಯನ್ನು ಮದುವೆಯಾಗಬೇಕು. ಈ ಸಂಬಂಧವನ್ನು ಗ್ರಾಮ ಸಭೆಯು ಅನುಮೋದಿಸುತ್ತದೆ ಎಂದು ಸಂಪ್ರದಾಯ ಆದೇಶಿಸುತ್ತದೆ. ಇದನ್ನು ಹೋಳಿಯ ‘ಬಹಾ’ ಹಬ್ಬ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಹುಡುಗಿ ಮದುವೆ ಪ್ರಸ್ತಾಪವನ್ನು ಸ್ವೀಕರಿಸದಿದ್ದರೆ ಆ ಯುವಕನಿಗೆ ಶಿಕ್ಷೆ ವಿಧಿಸಲಾಗುತ್ತದೆ. ತಿರಸ್ಕರಿಸಲ್ಪಟ್ಟ ಯುವಕ ಬೇರೆಯವರನ್ನು ಮದುವೆಯಾಗುವವರೆಗೆ ಆತನ ಮನೆಯಿಂದ ಎತ್ತು, ಮೇಕೆ ಅಥವಾ ಜಾಗವನ್ನು ನೀಡಬೇಕು ಎಂದು ಅವರು ವಿವರಿಸಿದರು.

WhatsApp Group Join Now
Telegram Group Join Now
Share This Article
error: Content is protected !!