ಡೆಹ್ರಾಡೂನ್: ಉತ್ತರಾಖಂಡ ರಾಜಧಾನಿಯಲ್ಲಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಒಬ್ಬರು, ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಕಾನ್ಸ್ಟೇಬಲ್ ಖಾಸಗಿ ವಿಡಿಯೋಗಳನ್ನು ಮಾಡಿ ತನ್ನನ್ನು ಬ್ಲ್ಯಾಕ್ಮೇಲ್ ಮಾಡುತ್ತಿರುವುದಾಗಿಯೂ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆರೋಪಿಸಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ಡೆಹ್ರಾಡೂನ್ ಪಟೇಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪೊಲೀಸ್ ಕಾನ್ಸ್ಟೇಬಲ್ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ದೂರುದಾರ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಹೇಳಿಕೆಯನ್ನೂ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಮಾಹಿತಿಯ ಪ್ರಕಾರ, ಮಹಿಳಾ ಸಬ್ ಇನ್ಸ್‌ಪೆಕ್ಟರ್ ಕೆಲವು ಸಮಯದ ಹಿಂದೆ ಗುಡ್ಡಗಾಡು ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದ ಮಹಿಳಾ ಇನ್ಸ್‌ಪೆಕ್ಟರ್ ವೈಯಕ್ತಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಬಯಲು ಜಿಲ್ಲೆಗೆ ವರ್ಗಾವಣೆ ಮಾಡಲು ವಿನಂತಿಸಿದ್ದರು. ನಂತರ ಪೊಲೀಸ್ ಇಲಾಖೆ ಅವರನ್ನು ಡೆಹ್ರಾಡೂನ್‌ನ ಒಂದು ಶಾಖೆಗೆ ವರ್ಗಾವಣೆ ಮಾಡಿತ್ತು.
“ನಾನು ಹಾಗೂ ಆರೋಪಿ ಒಂದೇ ಠಾಣೆಯಲ್ಲಿ ಕರ್ತವ್ಯದಲ್ಲಿದ್ದೆವು. ಒಂದು ದಿನ ನಾನು ಕಚೇರಿಗೆ ಬರುವುದು ತಡವಾಗಿದ್ದು, ಅಧಿಕಾರಿಗಳು ವಿವರಣೆ ಕೇಳಿದ್ದರು. ಮನೆ ಕರ್ತವ್ಯ ಸ್ಥಳದಿಂದ ಬಹಳ ದೂರದಲ್ಲಿದೆ. ಮರುದಿನ ಕಚೇರಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುವಂತೆ ನಗರದ ಒಂದು ಹೋಟೆಲ್‌ನಲ್ಲಿ ತಂಗಲು ನಿರ್ಧರಿಸಿದ್ದೆ. ಎಲ್ಲಾ ಕಚೇರಿ ಕೆಲಸಗಳನ್ನು ಆರೋಪಿ ಕಾನ್ಸ್ಟೇಬಲ್ ಮಾಡುತ್ತಿದ್ದರು. ಹಾಗಾಗಿಯೇ ನಾನು ಕೂಡ ಆರೋಪಿ ಕಾನ್ಸ್ಟೇಬಲ್ಗೆ ಹೋಟೆಲ್‌ನಲ್ಲಿ ನನಗಾಗಿ ಒಂದು ಕೊಠಡಿ ಕಾಯ್ದಿರಿಸುವಂತೆ ಕೇಳಿದ್ದೆ”.