Ad imageAd image

ಹಾಡಹಗಲೇ ರೈತನ 7 ಲಕ್ಷ ಲೂಟಿ ಮಾಡಿ ಪರಾರಿ

Bharath Vaibhav
ಹಾಡಹಗಲೇ ರೈತನ 7 ಲಕ್ಷ ಲೂಟಿ ಮಾಡಿ ಪರಾರಿ
WhatsApp Group Join Now
Telegram Group Join Now

ರಾಯಚೂರು: ಜಿಲ್ಲೆಯಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ರೈತನೊಬ್ಬನಿಂದ ಬೈಕ್ ನಲ್ಲಿ ಬಂದಂತ ದುಷ್ಕರ್ಮಿಗಳು 7 ಲಕ್ಷ ಲೂಟಿ ಮಾಡಿ ಪರಾರಿಯಾಗಿರುವಂತ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರಿನಲ್ಲಿ ರೈತ ಶ್ರೀನಿವಾಸ್ ರಾವ್ ಎಂಬುವರು ಬ್ಯಾಂಕ್ ನಿಂದ ಹಣ ಡ್ರಾಮಾಡಿಕೊಂಡು ಬೈಕಿನ ಬ್ಯಾಗಿನಲ್ಲಿಟ್ಟು ಹಣ್ಣು ಖರೀದಿಸಲು ತೆರಳಿದ್ದರು.

ಇದೇ ಸಮಯಕ್ಕಾಗಿ ಕಾಯುತ್ತಿದ್ದಂತ ದುಷ್ಕರ್ಮಿಗಳು, ಬೈಕ್ ನಲ್ಲಿದ್ದಂತ 7 ಲಕ್ಷ ಹಣವನ್ನು ದೋಷಿಕೊಂಡು ಪರಾರಿಯಾಗಿರುವಂತ ಘಟನೆ ನಡೆದಿದೆ. ಈ ಸಂಬಂಧ ರೈತ ಶ್ರೀನಿವಾಸ್ ಗಬ್ಬೂರು ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಕ್ ನಲ್ಲಿದ್ದಂತ ರೈತ ಶ್ರೀನಿವಾಸ್ ರಾವ್ ಅವರ ಹಣವನ್ನು ದೋಚಿಕೊಂಡು ಪರಾರಿಯಾಗುವಂತ ದುಷ್ಕರ್ಮಿಗಳ ಕೃತ್ಯವೆಲ್ಲ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

 

 

WhatsApp Group Join Now
Telegram Group Join Now
Share This Article
error: Content is protected !!