ಮೈಸೂರು: ಮದುವೆಯಾಗಿದ್ದರೂ ಹೆಂಡ್ತಿಯನ್ನು ಬಿಟ್ಟು ಇನ್ಸ್ಟ್ರಗ್ರಾಮ್ನಲ್ಲಿ ಪರಿಚಯವಾದ ಸುಂದರಿ ಹಿಂದೆ ಹೋಗಿ ದುರಂತ ಅಂತ್ಯಕಂಡಿದ್ದಾನೆ. ದೊರೆಸ್ವಾಮಿ ಅಲಿಯಾಸ್ ಸೂರ್ಯ ಮೃತ ವ್ಯಕ್ತಿ. ಈತ ಮೈಸೂರು ತಾಲ್ಲೂಕಿನ ಅನುಗನಹಳ್ಳಿಯ ನಿವಾಸಿಯಾಗಿದ್ದು, ಆರೇಳು ವರ್ಷಗಳ ಹಿಂದ ಮೈಸೂರಿನ ಹಿನಕಲ್ನ ನಿವಾಸಿ ದೀಪಿಕಾಳ ಮದುವೆಯಾಗಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಸಹ ಇನ್ಸ್ಟ್ರಗ್ರಾಮ್ನಲ್ಲಿ ಪರಿಚಯವಾದ ಶ್ವೇತಾ ಎನ್ನುವ ಸುಂದರಿಯ ಬಲೆಗೆ ಬಿದ್ದು ಇದೀಗ ಕೊಲೆಯಾಗಿದ್ದಾನೆ.
ನಿನ್ನೆ (ಮಾರ್ಚ್ 14) ರಾತ್ರಿ ಕೂಡ ಅನುಗನಹಳ್ಳಿಯ ತೋಟದ ಮನೆಯಲ್ಲಿ ಶ್ವೇತಾ ಹಾಗೂ ಸೂರ್ಯ ಜೊತೆಯಲ್ಲೆ ಇದ್ದರು ಆದ್ರೆ, ಬೆಳಗಾಗುವಷ್ಟರಲ್ಲಿ ರೌಡಿ ಶೀಟರ್ ಸೂರ್ಯ ಕೊಲೆಯಾಗಿದ್ದಾನೆ. ಆದ್ರೆ, ಶ್ವೇತಾ ಮಾತ್ರ ಪರಾರಿಯಾಗಿದ್ದಾಳೆ. ಇನ್ನು ಕೊಲೆಯಾಗಿರೋ ಸ್ಥಳದಲ್ಲಿ ಹೋಟೆಲ್ನಿಂದ ತಂದ ಆಹಾರ ಪದಾರ್ಥಗಳು ಬಿದ್ದಿವೆ. ಇನ್ನು ಪ್ರೇಯಸಿ ಶ್ವೇತಾಳಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಈ ಕೃತ್ಯದ ಹಿಂದೆ ಶ್ವೇತಾಳ ಕೈವಾಡ ಇದೆ ಎನ್ನುವ ಅನುಮಾನ ವ್ಯಕ್ತವಾಗಿದೆ.




