ಚನ್ನಮ್ಮನ ಕಿತ್ತೂರು : ರಾಜ್ಯಾಧ್ಯಾಂತ ಹೋಳಿ ಹಬ್ಬದಂದು ದ್ವಿತೀಯ ಪಿಯುಸಿ ಪರೀಕ್ಷೆ ಇದ್ದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಾರ್ವಜನಿಕರು ಯಾವುದೇ ರೀತಿಯ ಬಣ್ಣಗಳನ್ನು ಹಚ್ಚದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದರು ಹಬ್ಬದ ನಡುವೆಯು ಸಹ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ಹೊಗಿ ಪರೀಕ್ಷೆ ಬರೆದರು.
ಕಿತ್ತೂರಿನ ಬಿವಿ ನ್ಯೂಸ್ ವರದಿಗಾರರಾದ ಬಸವರಾಜ ಭಿಮರಾಣಿ ಅವರು ಕಿ ನಾ ವಿ ವಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬಗ್ಗೆ ಮತ್ತು ಹೋಳಿ ಹಬ್ಬದ ಬಗ್ಗೆ ಸಂದರ್ಶನ ಮಾಡಿದರು. ವಿದ್ಯಾರ್ಥಿನಿಯರು ಮಾತನಾಡಿ ನಾವು ಪರೀಕ್ಷೆ ಬರೆಯಲು ಬರುವ ಸಂದರ್ಭದಲ್ಲಿ ಸಾರ್ವಜನಿಕರು ನಮ್ಮಗೆ ಬಣ್ಣ ಹಚ್ಚದೆ ಪರೀಕ್ಷಾ ಕೇಂದ್ರಕ್ಕೆ ಹೊಗುಲು ಸುಗಮವಾಗಿ ಸಹಕಾರ ಕೊಟ್ಟಿದ್ದಾರೆ ಮತ್ತು ಪರೀಕ್ಷಾ ಕೇಂದ್ರದಲ್ಲಿ ನಮ್ಮಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಆಗಲ್ಲಿಲ ಶಿಕ್ಷಣ ಇಲಾಖೆ ನಮಗೆ ಎಲ್ಲಾ ತರಹದ ಸವಲತ್ತುಗಳನ್ನು ಓದಗಿಸಲಾಯಿತು.
ಕಿತ್ತೂರಿನ ಕಿ ನಾ ವಿ ವಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಎನ್ ಜಿ ಪಾಟೀಲ ಅವರು ಮಾತನಾಡಿ ಇವತ್ತು ನಾಡಿನಾದ್ಯಂತ ಹೋಳಿ ಹಬ್ಬದ ಸಂದರ್ಭದಲ್ಲಿ ಜನರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ರೀತಿಯ ಅಡ್ಡಿಪಡಿಸಿಲ್ಲ ಆದರಲೂ ವಿಶೇಷವಾಗಿ ಮಕ್ಕಳು ಹೋಳಿ ಹಬ್ಬದ ಸಂಭ್ರಮದಲ್ಲಿ ತೊಡಗಬೇಕಾಗಿರುವಂತದ್ದು ಅಂತಹ ಹೋಳಿ ಹಬ್ಬವನ್ನು ಮರೆತು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳು ಅತ್ಯಂತ ಕಾತುರದಿಂದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಶಿಕ್ಷಣ ಇಲಾಖೆಯವರು ಪ್ರಶ್ನೆ ಪತ್ರಿಕೆ ವಿತರಣೆ ಇರಬಹುದು ಮೇಲ್ವಿಚಾರಕರು ಇರಬಹುದು ಪರೀಕ್ಷೆಗೆ ಎಲ್ಲ ರೀತಿಯಲ್ಲಿ ಶಿಕ್ಷಣ ಇಲಾಖೆಯವರು ವ್ಯವಸ್ಥೆ ಮಾಡಿ ಕೊಟ್ಟಾದ್ದಾರೆ ಪರೀಕ್ಷೆ ಅಚ್ಚುಕಟ್ಟಾಗಿ ನಡೆಯಲು ಶಿಕ್ಷಣ ಇಲಾಖೆಯವರು ವ್ಯವಸ್ಥೆ ಮಾಡಿದ್ದಾರೆ. ಎಂದು ಹೇಳಿದರು.
ಪರೀಕ್ಷೆ ಬರೆಯಲು ಆಗಮಿಸಿದ ಕಿ ನಾ ವಿ ವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮಾತನಾಡಿದರು.
ವರದಿ-:ಬಸವರಾಜ ಭಿಮರಾಣಿ




