ನಿಪ್ಪಾಣಿ: ನಿಪ್ಪಾಣಿ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಜೊತೆಗೆ ದರ್ಜೆಯುತ ಕಾಮಗಾರಿಗೆ ಒತ್ತು ನೀಡಲಾಗುತ್ತಿದೆ.ಇದಕ್ಕೆ ಉತ್ತಮ ಉದಾಹರಣೆ CIRFNH ಇಲಾಖೆಯಿಂದ ಮಂಜೂರಾದ 4ಕೋಟಿ 80ಲಕ್ಷ ರೂಪಾಯಿಗಳ ಬೆಡಕಿಹಾಳ = ಶಮನೇವಾಡಿ ಹಾಗೂ ಭೋಜ ಕ್ರಾಸದಿಂದ ನೇಜ ಕ್ರಾಸ್ ಬೋರಗಾವದಿಂದ ಐಕೋ ವರೆಗಿನ ರಸ್ತೆಗಳು ಸಾಕ್ಷಿಯಾಗಿವೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.
ಅವರು ನಿಪ್ಪಾಣಿ ತಾಲೂಕಿನ ಭೋಜ ಕ್ರಾಸ್ ಬಳಿ ಮೂರು ರಸ್ತೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾರಂಭದಲ್ಲಿ ಗಣ್ಯರಿಂದ ಶ್ರೀಫಲಾರ್ಪಣೆ ತದನಂತರ ಶಾಸಕಿ ಶಶಿಕಲಾ ಜೊಲ್ಲೆ ಯವರಿಂದ ರಿಬ್ಬನ್ ಬಿಚ್ಚಿ ರಸ್ತೆಗಳ ಲೋಕಾರ್ಪಣೆ ಮಾಡಿದರು.
ಈ ಸಂಧರ್ಭದಲ್ಲಿ ಹಾಲ ಶುಗರ್ ಅಧ್ಯಕ್ಷ ಎಂ. ಪಿ.ಪಾಟೀಲ ಉಪಾಧ್ಯಕ್ಷ ಪವನ್ ಪಾಟೀಲ್ ಸುರೇಶ ದೇಸಾಯಿ ಡಾಕ್ಟರ್ ಸುದರ್ಶನ್ ಮೂರಾಬಟ್ಟೆ ಮಾತನಾಡಿದರು. ಸಮಾರಂಭದಲ್ಲಿ ಜಯಕುಮಾರ ಖೋತ,ಆರ್.ಜಿ. ಡೊಮನೇ ರಮೇಶ ಪಾಟೀಲ ಸಿದ್ದು ನರಾಟೆ ಶ್ರೀಕಾಂತ್ ಬನ್ನೇ ಸೇರಿದಂತೆ ಭೋಜ ಬೇಡಕಿಹಾಳ ಗಳತಗಾ ಶಮನೇವಾಡಿ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಮಹಾವೀರ ಚಿಂಚಣೆ : ನಿಪ್ಪಾಣಿ




