Ad imageAd image

62ನೇ ವಯಸ್ಸಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ!!

Bharath Vaibhav
62ನೇ ವಯಸ್ಸಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ!!
WhatsApp Group Join Now
Telegram Group Join Now

ನವದೆಹಲಿ: ಇನ್ನೂ 40 ದಾಟುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟಿಗರು ನಿವೃತ್ತಿ ಹೇಳುತ್ತಿರುವ ಈ ಹೊತ್ತಲ್ಲಿ ಅತ್ತ ಓರ್ವ ಆಟಗಾರ ತನ್ನ 62ನೇ ವಯಸ್ಸಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ.

ಅಚ್ಚರಿಯಾದರೂ ಇದು ಸತ್ಯ… ಇಷ್ಟು ದಿನ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಯಾರು ಎಂದು ಕೇಳಿದರೆ ಈವರೆಗೆ ಓಸ್ಮಾನ್ ಗೋಕರ್ ಹೆಸರು ಕೇಳಿ ಬರುತ್ತಿತ್ತು. ಆದರೀಗ ಈ ದಾಖಲೆ ಇದೀಗ ಇತಿಹಾಸ ಪುಟ ಸೇರಿದ್ದು, ಓಸ್ಮಾನ್ ಅವರಿಗಿಂತಲೂ ಹಿರಿಯ ಆಟಗಾರರೊಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಫಾಕ್​ಲ್ಯಾಂಡ್ ಐಲ್ಯಾಂಡ್ ಬರೊಬ್ಬರಿ 62 ವರ್ಷ ವಯಸ್ಸಿನ ಮ್ಯಾಥ್ಯೂ ಬ್ರೌನ್ಲೀ (Matthew Brownlee) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ. ಆ ಮೂಲಕ 62ನೇ ವಯಸ್ಸಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಗೆ ಮ್ಯಾಥ್ಯೂ ಬ್ರೌನ್ಲೀ ಪಾತ್ರರಾಗಿದ್ದಾರೆ.

ಕೋಸ್ಟಾರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಫಾಕ್​ಲ್ಯಾಂಡ್ ಐಲ್ಯಾಂಡ್ ಪರ ಕಣಕ್ಕಿಳಿಯುವ ಮೂಲಕ ಮ್ಯಾಥ್ಯೂ ಬ್ರೌನ್ಲೀ ಈ ಸಾಧನೆ ಮಾಡಿದ್ದು, ಇದರೊಂದಿಗೆ ಮ್ಯಾಥ್ಯೂ ಬ್ರೌನ್ಲೀ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!