ಬೆಂಗಳೂರು : ಮಹಿಳೆಯರೂ ಪಕ್ಷಕ್ಕಾಗಿ ದುಡಿಯಬೇಕು, ಈ ನಿಟ್ಟಿನಲ್ಲಿ 74 ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಘೋಷಣೆ ಮಾಡಿದರು.
ಅರಮನೆ ಮೈದಾನದಲ್ಲಿ ಇಂದು ನಡೆದ ರಾಜ್ಯ ಯುವ ಕಾಂಗ್ರೆಸ್ ನ ನೂತನ ಅಧ್ಯಕ್ಷರ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ನಿಮ್ಮಲ್ಲೇ ಜಗಳವಾಡದೇ ಪಕ್ಷಕ್ಕಾಗಿ ಮಹಿಳೆಯರೂ ದುಡಿದರೆ 2028ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುಲಿದೆ. ಆಗ ದೇಶದಲ್ಲಿ ಕಾಂಗ್ರೆಸ್ ಧ್ವಜ ಹಾರಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಟೀಕೆಗಳು ಬರುತ್ತವೆ, ಸಾಯುತ್ತದೆ. ಆದರೆ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಅವರು ಕಿವಿಮಾತು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದವರೇ ನಾಯಕ. ಬೂತ್ನಲ್ಲಿ ಎಲ್ಲರನ್ನು ಮೆಂಬರ್ ಮಾಡಬೇಕು. ಅಪರ್ಣಾ ಮನೋಭಾವದಿಂದ ಕೆಲಸ ಮಾಡಬೇಕು. ಗೆದ್ದ ತಕ್ಷಣ ಲೀಡರ್ ಅಲ್ಲ, ಮತ ಹಾಕಿದವನೇ ನಾಯಕ ಎಂದು ಯುವ ಕಾರ್ಯಕರ್ತರಿಗೆ ಡಿಸಿಎಂ ಸಲಹೆ ನೀಡಿದರು.