ಬೆಂಗಳೂರು : ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಇಂದು ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸಿದ್ದು, ಕೇಂದ್ರದಲ್ಲೂ SCSP-TSP ಕಾಯ್ದೆಯನ್ನು ಬಿಜೆಪಿ ಜಾರಿಗೆ ತರಲಿ ಎಂದು ಬಿಜೆಪಿ ನಾಯಕರಿಗೆ ಸವಾಲು ಎಸೆದರು.
ದಲಿತರ ಹಣ ಡೈವರ್ಟ್ ಮಾಡಿದ್ದೀರಿ ಎಂಬ ಶಾಸಕ ಸುನೀಲ್ ಕುಮಾರ್ ಅವರ ಆರೋಪಕ್ಕೆ ಉತ್ತರಿಸಿದ ಸಿಎಂ, ನೀವು SCSP-TSP ಕಾಯ್ದೆಯನ್ನು ಕೇಂದ್ರದಲ್ಲಿ ಜಾರಿಗೆ ತರುತ್ತೀರಾ?ಈ ಬಗ್ಗೆ ಈ ಸದನದಲ್ಲಿ ನಿರ್ಣಯ ಕೈಗೊಳ್ಳೋಣವೇ ಎಂದು ಬಿಜೆಪಿ ಸದಸ್ಯರಿಗೆ ಸಿಎಂ ಸವಾಲು ಹಾಕಿದರು.
ಈ ವೇಳೆ ಸಿಎಂ ಸವಾಲ್ಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಹಣ ಡೈವರ್ಟ್ ಬಗ್ಗೆ ಸಿಎಂ ಮಾತನಾಡುತ್ತಿಲ್ಲವೆಂದು ಕುಟುಕಿದರು. ಸುನೀಲ್ ಕುಮಾರ್ ಆಕ್ಷೇಪಕ್ಕೆ ಸಿಎಂ ಮರು ಉತ್ತರಿಸಿ, ಹೌದು.. ನಾವು ಡೈವರ್ಟ್ ಮಾಡಿಲ್ಲ ಎಂದರು.
ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಸುನಿಲ್ನ ಸುಮ್ನೆ ಕೂರಿಸಿ ಎಂದು ಸ್ಪೀಕರ್ಗೆ ಸಿಎಂ ಸೂಚನೆ ನೀಡಿದರು. ಸ್ಪೀಕರ್ ಸ್ಥಾನದಲ್ಲಿದ್ದ ಶಿವಲಿಂಗೇಗೌಡರಿಗೆ ಸಿಎಂ ಸೂಚನೆ ನೀಡಿದ ಬಳಿಕವೂ ಮಾತನಾಡಲು ಮುಂದಾದ ಸುನಿಲ್ ಅವರನ್ನು ಏಯ್ ಕೂತ್ಕಳಪ್ಪ, ಏನು ಡೀಸೆನ್ಸಿ ಇಲ್ವಾ ಎಂದು ಸಿಎಂ ಗದರಿದ ಪ್ರಸಂಗ ನಡೆಯಿತು.