ಬೆಂಗಳೂರು : ಆರ್ ಎಸ್ ಎಸ್ ಎನ್ನುವುದು ಬ್ರಿಟಿಷರ ಏಜೆಂಟರಿದ್ದಂತೆ, ನಾವು ಇವರನ್ನು ಎದುರಿಸಲು ಸದಾ ಸಿದ್ದರಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಭಾರತೀಯರೆಲ್ಲರೂ ಒಕ್ಕೊರಲಿನಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೊತ್ತಿನಲ್ಲಿ ಸಂಘಪರಿವಾರವು ಬ್ರಿಟಿಷರ ಜೊತೆ ನಿಂತಿತ್ತು.ಆರ್.ಎಸ್.ಎಸ್ ಎನ್ನುವುದು ಬ್ರಿಟಿಷರ ಏಜೆಂಟರಿದ್ದಂತೆ.ನಾವು ಇವರನ್ನು ಎದುರಿಸಲು ಸದಾ ಸಿದ್ಧರಿದ್ದೇವೆ ಎಂದರು.
ದಲಿತರು ದಲಿತರ ಕೇರಿಯಲ್ಲೇ ಇರಬೇಕು, ಘನತೆಯ ಬದುಕು ಕಟ್ಟಿಕೊಳ್ಳಬಾರದು ಎಂಬುದು ಸಂಘಪರಿವಾರದ ಆಂತರ್ಯದ ಬಯಕೆ. ನಮ್ಮ ಸರ್ಕಾರ ದಲಿತರಿಗೆ ಸಲ್ಲಬೇಕಿದ್ದ ನ್ಯಾಯಯುತ ಪಾಲನ್ನು ಅವರಿಗೆ ಸಿಗುವಂತೆ ಮಾಡಿದೆ ಎಂದು ಹೇಳಿದ್ದಾರೆ.