Ad imageAd image

ಮಹಿಳಾ ಗಗನಯಾತ್ರಿಗಳಿಗೆ ಪಿರಿಯಡ್ಸ್ ತೊಂದರೆಯೇ? ಹಾಗೇನಿಲ್ಲ ಎನ್ನುತ್ತಿದೆ ಅಧ್ಯಯನ

Bharath Vaibhav
ಮಹಿಳಾ ಗಗನಯಾತ್ರಿಗಳಿಗೆ ಪಿರಿಯಡ್ಸ್ ತೊಂದರೆಯೇ? ಹಾಗೇನಿಲ್ಲ ಎನ್ನುತ್ತಿದೆ ಅಧ್ಯಯನ
WhatsApp Group Join Now
Telegram Group Join Now

ನೇಕ ಮಹಿಳೆಯರು ತಮ್ಮ ಋತುಚಕ್ರದ ವೇಳೆ ಮನೆಯಿಂದ ಹೊರಗೆ ಹೆಜ್ಜೆಯಿಡಲು ಹಿಂಜರಿಯುತ್ತಾರೆ. ಈ ಸಮಯದಲ್ಲಿ ದೂರ ಪ್ರಯಾಣ ಮತ್ತು ಭೇಟಿಯಾಗುವುದನ್ನೂ ತಪ್ಪಿಸುತ್ತಾರೆ. ಆದರೆ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಮಹಿಳಾ ಗಗನಯಾತ್ರಿಗಳ ಪರಿಸ್ಥಿತಿ ಹೇಗಿರುತ್ತದೆ?. ಬಾಹ್ಯಾಕಾಶ ಯಾತ್ರೆಗಳ ಭಾಗವಾಗಿ ಅವರು ತಿಂಗಳುಗಟ್ಟಲೆ ಅಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಹಾಗಾದರೆ ಅವರು ಮುಟ್ಟಿನ ಸಮಯವನ್ನು ಹೇಗೆ ಎದುರಿಸುತ್ತಾರೆ?.

ಸಾಮಾನ್ಯವಾಗಿ ನಾವು ಪ್ರದೇಶಗಳನ್ನು ಬದಲಾಯಿಸಿದಾಗ ಮಾತ್ರ ಮುಟ್ಟಿನ ಚಕ್ರ ಬದಲಾಗುತ್ತದೆ ಎಂದು ಭಾವಿಸುತ್ತೇವೆ. ಒತ್ತಡವಿಲ್ಲದ ಸ್ಥಿತಿಯಲ್ಲಿ ಮುಟ್ಟು ನಿಯಮಿತವಾಗಿ ಆಗುತ್ತದೆಯೇ? ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಎದುರಿಸುವ ಮುಟ್ಟಿನ ಸವಾಲುಗಳೇನು ನೋಡೋಣ.

ರಷ್ಯಾದ ಗಗನಯಾತ್ರಿ ವ್ಯಾಲೆಂಟಿನಾ ತೆರೆಶ್ಕೋವಾ 1963ರಲ್ಲಿ ಬಾಹ್ಯಾಕಾಶಕ್ಕೆ ಕಾಲಿಟ್ಟ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅಂದಿನಿಂದ 60ಕ್ಕೂ ಹೆಚ್ಚು ಮಹಿಳೆಯರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದಾರೆ. ಭಾರತ ಮೂಲದ ಸುನೀತಾ ವಿಲಿಯಮ್ಸ್‌ ಅವರಂತೆಯೇ ಅವರು ಕೆಲವೊಮ್ಮೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ವಿವಿಧ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಾ ತಿಂಗಳುಗಟ್ಟಲೆ ಕಳೆದಿದ್ದರು.

ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಕಾಲಿಟ್ಟಾಗ ಅನೇಕರ ಮನಸ್ಸಿನಲ್ಲಿ ಮೂಡುವ ಮಹತ್ವದ ಪ್ರಶ್ನೆಯೊಂದಿಗೆ. ಅದು “ಮಹಿಳೆಯರು ಬಾಹ್ಯಾಕಾಶದಲ್ಲಿ ತಮ್ಮ ಮುಟ್ಟನ್ನು ಹೇಗೆ ಎದುರಿಸುತ್ತಾರೆ?” ಎಂಬುದು. ಕೆಲವು ಮಹಿಳೆಯರು ತಮ್ಮ ಋತುಚಕ್ರದ ಕಾರಣದಿಂದಾಗಿಯೇ ತಮ್ಮ ಬಾಹ್ಯಾಕಾಶ ಕನಸುಗಳನ್ನು ಬದಿಗಿಡುತ್ತಿದ್ದಾರೆ ಎಂಬ ಮಾತುಗಳೂ ಇವೆ. ಆರಂಭಿಕ ದಿನಗಳಲ್ಲಿ, ಹಾರ್ಮೋನುಗಳ ಬದಲಾವಣೆಗಳು ಮತ್ತು ತೂಕವಿಲ್ಲದಿರುವಿಕೆಯ ಸವಾಲುಗಳನ್ನು ತಡೆದುಕೊಳ್ಳಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ ಎಂದು ನಂಬಿ ಮಹಿಳೆಯರು ಬಾಹ್ಯಾಕಾಶ ಯಾನಗಳಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ ಎಂಬದನ್ನು ಇಲ್ಲಿ ಗಮನಿಸಬೇಕು.

ಭೂಮಿಯ ಮೇಲೆ ಮುಟ್ಟಿನ ಸಮಯದಲ್ಲಿ ದೇಹದಿಂದ ರಕ್ತ ಹೊರಬರುವಂತೆಯೇ, ಬಾಹ್ಯಾಕಾಶದಲ್ಲಿಯೂ ಅದು ಸಂಭವಿಸುತ್ತದೆ ಮತ್ತು ಮುಟ್ಟಿನ ಚಕ್ರದಲ್ಲಿ ಯಾವುದೇ ಬದಲಾವಣೆಗಳಿಲ್ಲದಿರಬಹುದು. ಆದ್ದರಿಂದ, ಈ ಸಮಯದಲ್ಲಿ ಅವರು ಯಾವುದೇ ಅಸ್ವಸ್ಥತೆ ಅಥವಾ ಭಯ ಅನುಭವಿಸುವ ಅಗತ್ಯವಿಲ್ಲ ಎಂದು ಖ್ಯಾತ ಬಾಹ್ಯಾಕಾಶ ಸ್ತ್ರೀರೋಗ ತಜ್ಞೆ ವರ್ಷಾ ಜೈನ್ ಹೇಳುತ್ತಾರೆ.

ಇಂತಹ ಮಾತ್ರೆಗಳು ಮಾತ್ರ ಅಲ್ಲ. ಐಯುಡಿಗಳು ಮತ್ತು ಸಬ್ಡರ್ಮಲ್ ಇಂಪ್ಲಾಂಟ್‌ಗಳಂತಹ ದೀರ್ಘಕಾಲ ಕಾರ್ಯನಿರ್ವಹಿಸುವ ಗರ್ಭನಿರೋಧಕ ವಿಧಾನಗಳು ಮಹಿಳಾ ಗಗನಯಾತ್ರಿಗಳು ತಮ್ಮ ಮುಟ್ಟನ್ನು ಮುಂದೂಡಲು ಅನುವು ಮಾಡಿಕೊಡುತ್ತದೆ. ಆದ್ರೂ ಇವು ಬಾಹ್ಯಾಕಾಶದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಇನ್ನಷ್ಟು ಆಳವಾದ ಸಂಶೋಧನೆ ನಡೆಯಬೇಕಾಗಿದೆ ಎಂದು ವರ್ಷಾ ಹೇಳುತ್ತಾರೆ.

ಆದರೂ ಬಾಹ್ಯಾಕಾಶದಲ್ಲಿ ತಮ್ಮ ಋತುಚಕ್ರ ಸಮಯವನ್ನು ಮುಂದುವರಿಸಬೇಕೇ ಅಥವಾ ಮುಂದೂಡಬೇಕೇ ಎಂದು ನಿರ್ಧರಿಸುವುದು ಸಂಪೂರ್ಣವಾಗಿ ಮಹಿಳಾ ಗಗನಯಾತ್ರಿಗಳ ಮೇಲಿದೆ ಮತ್ತು ಅವರ ಪಿರಿಯಡ್ಸ್​ ಕಾರಣದಿಂದಾಗಿ ಅವರು ತಮ್ಮ ಕನಸುಗಳನ್ನು ಬದಿಗಿಡುವುದು ಸರಿಯಲ್ಲ ಎಂದು ತಜ್ಞರು ನಂಬುತ್ತಾರೆ.

 

 

 

WhatsApp Group Join Now
Telegram Group Join Now
Share This Article
error: Content is protected !!