ಅಹ್ಮದಾಬಾದ್: ನಾಯಕ ಶ್ರೇಯಸ್ ಅಯ್ಯರ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಪಂದ್ಯಾವಳಿಯ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಗುಜರಾತ ಟೈಟನ್ಸ್ ವಿರುದ್ಧ 11 ರನ್ ಗಳ ರೋಚಕ ಜಯ ಪಡೆದು ಶುಭಾರಂಭ ಮಾಡಿತು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗೆ 243 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಪಡೆದಿದ್ದ ಗುಜರಾತ್ ಟೈಟನ್ಸ್ 5 ವಿಕೆಟ್ ಗೆ 232 ರನ್ ಗಳಿಸಿ ವೀರೋಚಿತ ಸೋಲು ಅನುಭವಿಸಿತು.
ಪಂಜಾಬ್ ಕಿಂಗ್ಸ್ ಪರ ನಾಯಕ ಶ್ರೇಯಸ್ ಅಯ್ಯ ಸೇರಿದಂತೆ ಎಲ್ಲ ಆಟಗಾರರು ಬಿರುಸಿನ ಆಟಕ್ಕೆ ಇಳಿದಿದ್ದು ಅವರ ಗೆಲುವಿಗೆ ಕಾರಣವಾಯಿತು. ಇತ್ತ ಗುಜರಾತ್ ಟೈಟನ್ಸ್ ನಾನೇನೂ ಕಮ್ಮಿ ಎನ್ನುವಂತೆ ಹೋರಾಟ ನೀಡಿತು. ಪಂಜಾಬ್ ಕಿಂಗ್ಸ್ ಪರ ಚೊಚ್ಚಲ ಪಂದ್ಯದಲ್ಲಿ ಆಡುತ್ತಿದ್ದ ಪ್ರಿಯಾನ್ಸ್ ಆರ್ಯ ಶ್ರೇಯಸ್ ಅಯ್ಯರ ಹಾಗೂ ಶಶಾಂಕ ಸಿಂಗ್ ಗುಜರಾತ್ ಟೈಟನ್ಸ್ ಬೌಲರುಗಳನ್ನು ಮನ ಬಂದಂತೆ ದಂಡಿಸಿದರು.
ಸ್ಕೋರ್ ವಿವರ:
ಪಂಜಾಬ್ ಕಿಂಗ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 243
( ಶ್ರೇಯಸ್ ಅಯ್ಯರ 97, 42 ಎಸೆತ, 5 ಬೌಂಡರಿ, 9 ಸಿಕ್ಸರ್, ಪ್ರಿಯಾನ್ಸ್ ಆರ್ಯ 47, 23 ಎಸೆತ, 7 ಬೌಂಡರಿ, 2 ಸಿಕ್ಸರ್ ) ಶಶಾಂಕ ಸಿಂಗ್ 44 ( 16 ಎಸೆತ, 6 ಬೌಂಡರಿ, 2 ಸಿಕ್ಸರ್)
ಗುಜರಾತ್ ಟೈಟನ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 232
ಸಾಯಿ ಸುದರ್ಶನ್ 74, 41 ಎಸೆತ, 5 ಬೌಂಡರಿ, 6 ಸಿಕ್ಸರ್, ಶುಭಮನ್ ಗಿಲ್ 33, 14 ಎಸೆತ, 2 ಬೌಂಡರಿ, 3 ಸಿಕ್ಸರ್, ಜೋಷ್ ಬಟ್ಲರ್ 54, 33 ಎಸೆತ, 4 ಬೌಂಡರಿ, 2 ಸಿಕ್ಸರ್, ಎಸ್. ರೋದರ್ ಪೋರ್ಡ್ 46, 28 ಎಸೆತ, 4 ಬೌಂಡರಿ, 3 ಸಿಕ್ಸರ್. ಪಂದ್ಯ ಶ್ರೇಷ್ಠ ಶ್ರೇಯಸ್ ಅಯ್ಯರ ( ಪಂಜಾಬ್ ಕಿಂಗ್ಸ್)