ಯಾದಗಿರಿ : ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾ.27 ಹಾಗೂ 28 ರಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರ ಅಧ್ಯಕ್ಷ ಮಂದಾಕೃಷ್ಣ ಮಾದಿಗ ಅವರ ಮಾರ್ಗದರ್ಶನದಲ್ಲಿ ಒಳ ಮೀಸಲಾತಿ ಜಾರಿ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ ಜಿಲ್ಲೆಯ ಎಂ ರ್ ಪಿ ಎಸ್ ಜಿಲ್ಲಾ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ಅವರು ಹೇಳಿದರು.
ಬೆಂಗಳೂರಿನಲ್ಲಿ ಮಾ.27ರಂದು ಕಾರ್ಯಾಗಾರ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆ ಜರುಗುವುದು. ಹಾಗೆಯೇ ಮಾ.28ರಂದು ಒಳ ಮೀಸಲಾತಿ ಬೆಂಬಲಿಸುವ ಎಲ್ಲ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಐಎಎಸ್, ಐಪಿಎಸ್, ಕೆಎಎಸ್ ಹಾಲಿ ಮತ್ತು ಮಾಜಿ ಅಧಿಕಾರಿಗಳು, ಹಾಲಿ ಮತ್ತು ಮಾಜಿ ಶಾಸಕ, ಸಚಿವರು ಜೊತೆಗೆ ಮಾದರ ಚನ್ನಯ ಸ್ವಾಮಿಜಿ ಅವರು ಸೇರಿದಂತೆ ಇತರೆ ಮಠಾಧೀಶರು ಪಾಲ್ಗೊಳ್ಳುವರು ಎಂದು ತಿಳಿಸಿದರು
ಅಂದು ಮಧ್ಯಾಹ್ನದ ಬಳಿಕ ಮುಂದಿನ ಹೋರಾಟದ ಬಗ್ಗೆ ಮಂದಾಕೃಷ್ಣ ಮಾದಿಗ ಮತ್ತು ಎಂ ರ್ ಪಿ ಎಸ್ ರಾಜ್ಯ ಅಧ್ಯಕ್ಷ ನರಸಪ್ಪ ಬಿ ದಂಡೋರ ಅವರ ನೇತೃತ್ವದಲ್ಲಿ ಮೇಲಿನ ಎಲ್ಲ ಮಹನೀಯರ ಜೊತೆ ಮುಂದಿನ ಹೋರಾಟದ ಬಗ್ಗೆ ವಿಶೇಷ ಸಭೆ ಮಾಡಲಾಗುವುದು. ಈ ಎರಡು ದಿವಸದ ಕಾರ್ಯಾಗಾರ ಹಾಗೂ ಸಭೆಯಲ್ಲಿ ಜಿಲ್ಲೆಯ ಸಮಾಜ ಬಾಂಧವರು, ವಕೀಲರು, ಒಳಮೀಸಲಾತಿ ಪರ ಹೋರಾಟಗಾರರು, ಸಂಘಟನೆಗಳ ಪ್ರಮುಖರು, ಒಟ್ಟಾರೆ ಒಳ ಮೀಸಲಾತಿ ಪರ ಬೆಂಬಲಿಸುವ ಎಲ್ಲರು ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಗಣೇಶ್ ದುಪ್ಪಲ್ಲಿ. ಜಿಲ್ಲಾ ಉಪಾಧ್ಯಕ್ಷ ಮಲ್ಲು ಬೆಳಗೆರೆ. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜು ಕಡೇಚೂರು.ಚಂದ್ರು. ಮಲ್ಲು ಗುರುಮಾಠಕಲ್ ತಾಲೂಕ ಅಧ್ಯಕ್ಷ ರವಿ ಬುರನೋಳ್ ಇನ್ನಿತರರು ಭಾಗಿಯಾಗಿದ್ದರು