ನಿಪ್ಪಾಣಿ : ತಾಲೂಕಿನ ಬೋರಗಾಂವ ವೃತ್ತದಿಂದ ಐದನೇ ಮೈಲಿ ರಸ್ತೆಯ ಸಾರ್ವಜನಿಕ ಸ್ಮಶಾನದ ಬಳಿ ಓಮನಿ ವ್ಯಾನ್ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ.ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿದ್ದಾನೆ.
ರೆಹಾನ್ ಇಮಾಮ್ ಬುರ್ಖೆ(25) ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.ಓಮನಿ ವಾಹನ ಹೆರವಾಡದಿಂದ ಬೋರಗಾಂವ ಕಡೆಗೆ ಬರುತ್ತಿದ್ದು,ಇದೇ ವೇಳೆ ದ್ವಿಚಕ್ರ ವಾಹನ ಸವಾರ ಗೊಬ್ಬರ ಚೀಲಗಳನ್ನು ತೆಗೆದುಕೊಂಡು ಐದು ಮೈಲಿ ಕಡೆಗೆ ಹೋಗುತ್ತಿದ್ದಾಗ ಓಮನಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಓಮನಿ ವಾಹನ ಪಲ್ಟಿಯಾಗಿದ್ದು, ದ್ವಿಚಕ್ರ ವಾಹನ ಸವಾರ ರೆಹಾನ್ ಇಮಾಮ್ ಬುರ್ಖೆ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಚಲಕರಂಜಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.ಸದಲಗಾ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಎಂ.ಎ.ಜಮಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸದಲಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವರದಿ: ಮಹಾವೀರ ಚಿಂಚಣೆ