ವೆಲ್ಲಿಂಗ್ಟನ್: ಟಿಮ್ ಸಿಯಾಪೆರ್ಟ್ ಅವರ ಬಿರುಸಿನ ಆಟದ ನೆರವಿನಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ 5 ನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ 8 ವಿಕೆಟ್ ನಿಂದ ಸುಲಭದ ಜಯ ಪಡೆದು 4-1 ರಿಂದ ಸರಣಿ ಗೆದ್ದಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 20 ಓವರುಗಳಲ್ಲಿ 9 ವಿಕೆಟ್ ಗೆ 128 ರನ್ ಗಳನ್ನು ಮಾತ್ರ ಗಳಿಸಲು ಯಶಸ್ವಿಯಾಯಿತು. ಸುಲಭದ ಜಯದ ಗುರಿ ಹೊಂದಿದ್ದ ನ್ಯೂಜಿಲೆಂಡ್ ಕೇವಲ 10 ಓವರುಗಳಲ್ಲಿ 2 ವಿಕೆಟ್ ಗೆ 131 ರನ್ ಗಳಿಸಿ ಏಕಪಕ್ಷಿಯ ಪಂದ್ಯದಲ್ಲಿ ಗೆದ್ದಿತು. ಚಾಂಪಿಯನ್ಸ್ ಟ್ರೋಫಿಯಲ್ಲಿನ ಹೀನಾಯ ಪ್ರದರ್ಶನವನ್ನು ಇಲ್ಲಿಯೂ ಮುಂದುವರೆಸಿದ ಪಾಕಿಸ್ತಾನ ಹೀನಾಯವಾಗಿ ಸರಣಿ ಸೋತಿತು.
ಸ್ಕೋರ್ ವಿವರ:
ಪಾಕಿಸ್ತಾನ 20 ಓವರುಗಳಲ್ಲಿ 9 ವಿಕೆಟ್ ಗೆ 128
( ಸಲ್ಮಾನ್ ಆಘಾ 51, 39 ಎಸೆತ, 6 ಬೌಂಡರಿ, 1 ಸಿಕ್ಸರ್) ನಿಶಾಮ್ 22 ಕ್ಕೆ 5,
ನ್ಯೂಜಿಲೆಂಡ್ 10 ಓವರುಗಳಲ್ಲಿ 2 ವಿಕೆಟ್ ಗೆ 131,
ಟಿಮ್ ಸಿಯಾಪೆರ್ಟ್ ಅಜೇಯ 97, 38 ಎಸೆತ, 6 ಬೌಂಡರಿ, 10 ಸಿಕ್ಸರ್
(ಜಿಮ್ಮಿ ನಿಶಾಮ್ ಪಂದ್ಯ ಶ್ರೇಷ್ಠ)