ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು
ಶ್ರೀ ಶರಣಬಸವೇಶ್ವರ ಹಾಗೂ ಶ್ರೀ ಅಮರೇಶ್ವರ ಪ್ರೌಢಶಾಲೆ ಎರಡು ಕೇಂದ್ರಗಳಲ್ಲಿ ಒಟ್ಟು 672 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿದ ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಸಂಧಾನಿ ಎಂಡಿ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಕೋರುವ ಮೂಲಕ ಈ ಪರೀಕ್ಷೆಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಹಟ್ಟಿ ಚಿನ್ನದ ಗಣಿ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಹೇಳು ಮೂಲಕ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದರು, ಪರೀಕ್ಷೆ ಕೇಂದ್ರಗಳಲ್ಲಿ ಪೊಲೀಸ್ ಬಿಗಿ ಬಂದ ಬಸ್ ಏರ್ಪಡಿಸಲಾಗಿದ್ದು ಪರೀಕ್ಷೆ ಕೇಂದ್ರಕ್ಕೆ ಕೃಷಿ ಇಲಾಖೆಯ ಅಧಿಕಾರಿ ಭೇಟಿ ನೀಡಿದರು.
ಯಾವುದೇ ಕಾಫಿ ಚೀಟಿಯ ತೊಂದರೆ ಇಲ್ಲದೆ ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆಗಳನ್ನು ಬರೆದರು ಈ ಸಂದರ್ಭದಲ್ಲಿ ಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಧರ್ಮಣ್ಣ, ಪೊಲೀಸ್ ಸಿಬ್ಬಂದಿ ಹನುಮಂತ, ಸಿಆರ್ಪಿ ಸೇರಿದಂತೆ ಪರೀಕ್ಷ ಸಿಬ್ಬಂದಿಗಳು ಉಪಸ್ಥಿತರಿದ್ದರು .ಮುಂದಿನ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳ ಪ್ರಯತ್ನ ಯಶಸ್ವಿಯಾಗಲಿ.
ವರದಿ : ಶ್ರೀನಿವಾಸ ಮಧುಶ್ರೀ ಹಟ್ಟಿ ಚಿನ್ನದ ಗಣಿ