Ad imageAd image

ಸತ್ತಿಗೇರಿ ಏತ ನೀರಾವರಿ ಭೂಮಿ ಪೂಜೆ ಕಾರ್ಯಕ್ರಮ

Bharath Vaibhav
ಸತ್ತಿಗೇರಿ ಏತ ನೀರಾವರಿ ಭೂಮಿ ಪೂಜೆ ಕಾರ್ಯಕ್ರಮ
WhatsApp Group Join Now
Telegram Group Join Now

ಸೌವದತ್ತಿ : ಸತ್ತಿಗೇರಿ ಏತ ನೀರಾವರಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿತು.ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಇಂದು ಅಂದಾಜು ರೂ. 546 ಕೋಟಿ ವೆಚ್ಚದ ಸತ್ತಿಗೇರಿ ಏತ ನೀರಾವರಿ ಯೋಜನೆಯ ಭೂಮಿಪೂಜೆ ನೆರವೇರಿಸಿ, ನಂತರ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಭಾಗದ ಬಹುದಿನಗಳ ಕನಸು ಇಂದು ನನಸಾಗಿದೆ. ಈ ಯೋಜನೆಯಿಂದ ಸತ್ತಿಗೇರಿ, ಮುಗಳಿಹಾಳ, ಇಟ್ನಾಳ, ಗುಡುಮಕೇರಿ, ಕೋರಕೊಪ್ಪ, ಯರಗಣವಿ, ಅಕ್ಕಿಸಾಗರ, ಗೋವನಕೊಪ್ಪ, ಸೊಪಡ್ಡ, ಕೋಡ್ಲಿವಾಡ, ಕುರಬಗಟ್ಟಿ, ತಾವಲಗೇರಿ, ಶಿವಾಪೂರ, ಕೋಟೂರ, ಮಾಡಮಗೇರಿ, ರೈನಾಪೂರ, ದಾಸನಾಳ, ಮೆಳ್ಳಿಕೇರಿ ಸೇರಿದಂತೆ ಅನೇಕ ಗ್ರಾಮದ ರೈತರಿಗೆ ಲಾಭವಾಗಲಿದೆ.

ಈ ಸಂಧರ್ಭದಲ್ಲಿ ಪರಮ ಪೂಜ್ಯರು, ಶಾಸಕರುಗಳಾದ ಶ್ರೀ ವಿಶ್ವಾಸ ವೈದ್ಯ, ಶ್ರೀ ಬಾಬಾಸಾಹೇಬ ಪಾಟೀಲ, ಗುರು ಹಿರಿಯರು ಸೇರಿ ಸ್ಥಳೀಯ ಮುಖಂಡರು, ರೈತ ಭಾಂದವರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!