Ad imageAd image

ಮಠ ಮಂದಿರಗಳಿಂದ ಪರಿಸರ ಪವಿತ್ರ

Bharath Vaibhav
ಮಠ ಮಂದಿರಗಳಿಂದ ಪರಿಸರ ಪವಿತ್ರ
WhatsApp Group Join Now
Telegram Group Join Now

ಮಠ ಮಂದಿರಗಳಿಂದ ಪರಿಸರ ಪವಿತ್ರ. ಚಾಂದಶಿರದವಾಡ ಗ್ರಾಮದಲ್ಲಿ ಹನುಮಾನ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆವೇಳೆ ಬಸವ ಪ್ರಸಾದ್ ಜೊಲ್ಲೆ ಅಭಿಮತ.

ನಿಪ್ಪಾಣಿ : ಮಠ ಮಂದಿರಗಳು ಪವಿತ್ರ ಸ್ಥಾನಗಳಾಗಿದ್ದು ಇಂತಹ ಮಂದಿರಗಳಲ್ಲಿ ಸ್ವಲ್ಪ ವಿಶ್ರಾಂತಿ ಪಡೆದರೆ ಸ್ವಚ್ಚ ಪರಿಸರದ ಜೊತೆಗೆ ಮನಸ್ಸು ಪವಿತ್ರವಾಗಿರುತ್ತೆ ಎಂದು ಬಸವ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ್ ಜೊಲ್ಲೆ ಅಭಿಮತ ವ್ಯಕ್ತಪಡಿಸಿದರು. ಅವರು ನಿಪ್ಪಾಣಿ ತಾಲೂಕಿನ ಚಾಂದ ಶಿರದವಾಡ ಗ್ರಾಮದ ದೂದಗಂಗಾ ನದಿ ಪರಿಸರದಲ್ಲಿ 10ಲಕ್ಷ ರೂಪಾಯಿ ಗಳ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಹನುಮಾನ್ ಮಂದಿರದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪ್ರಾರಂಭದಲ್ಲಿ ಶೇಖರ್ ಸ್ವಾಮಿ ವಿಶಾಲ್ ಗುರವ ಹಾಗೂ ಗುರುಸಿದ್ಧ ಸ್ವಾಮಿಯವರ ಅಧಿಪತ್ಯದಲ್ಲಿ ಹಾಗೂ ಬಿಜೆಪಿ ಕಾರ್ಯಕರ್ತ ಅಣ್ಣಾ ಪಾಟೀಲರ ಉಪಸ್ಥಿತಿಯಲ್ಲಿ ಬೀರೇಶ್ವರ ಅಧ್ಯಕ್ಷ ಸಂಜಯ ಪಾಟೀಲ ಹಾಗೂ ಅವರ ಧರ್ಮಪತ್ನಿ ಅರ್ಚನಾ ದಂಪತಿಗಳಿಂದ ಪೂಜಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಬಸವ ಪ್ರಸಾದ್ ಜೊಲ್ಲೆಯವರ ಹಸ್ತದಿಂದ ಶ್ರೀಫಲ ಅರ್ಪಿಸಿ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಶಿವಾಜಿ ರೂಪಾಳೆ ಉಪಾಧ್ಯಕ್ಷ ಮಹಾವೀರ ಲಡಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳಾಬಾಯಿ ಪೂಜಾರಿ, ಅಭಯ್ ಪಾಟೀಲ ಸಂತೋಷ್ ಪಾಟೀಲ್ ಶೀತಲ ಲಡಗೆ ಅಜಿತ ತೋಡಕರ, ಸಚಿನ್ ಪಡಲಾಳೆ ಸಂಜಯ ದೇವಗೊಂಡ ಪಾಟೀಲ ಶೀತಲ್ ಪಾಟೀಲ ಆನಂದ ಪಾಟೀಲ ಅಜಿತ್ ಪಾಟೀಲ ಸಂಜಯ ಸ್ವಾಮಿ, ಅರ್ಜುನ ಪರಿಟ್ ಸುರೇಶ್ ಖೋತ, ರವೀಂದ್ರ ಸ್ವಾಮಿ ಸೇರಿದಂತೆ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
Share This Article
error: Content is protected !!