ಬೆಂಗಳೂರು:ಐಪಿಎಲ್ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಬ್ಲಾಕ್ಬಾಸ್ಟರ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.
ಎರಡೂ ತಂಡಗಳು ಈ ಋತುವಿನಲ್ಲಿ ತಲಾ 2 ಪಂದ್ಯಗಳನ್ನಾಡಿವೆ. ಆರ್‌ಸಿಬಿ ತಾನಾಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದರೆ, ಎರಡನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಜಯಿಸಿದೆ. ಗುಜರಾತ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ, ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿದೆ.
ಇದೀಗ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಲು ಗುಜರಾತ್ ಟೈಟಾನ್ಸ್ ತಯಾರಿ ನಡೆಸುತ್ತಿದೆ. ಜೊತೆಗೆ ನಾಳೆಯ ಪಂದ್ಯದಲ್ಲಿ ಆರ್ಸಿಬಿಗೆ ಟಕ್ಕರ್ ಕೊಡಲು ಮಾಜಿ ಬೌಲರ್ ಕೂಡ ಭರ್ಜರಿ ತಯಾರಿ ನಡೆಸಿದ್ದಾರೆ. ಹೌದು, ಈ ಹಿಂದೆ ಆರ್ಸಿಬಿಯ ಪ್ರಮುಖ ಬೌಲರ್ ಆಗಿದ್ದ ಮೊಹಮ್ಮದ್ ಸಿರಾಜ್ ಈ ಬಾರಿ ಗುಜರಾತ್ ಟೈಟಾನ್ ಪರ ಕಣಕ್ಕಿಳಿಯುತ್ತಿದ್ದಾರೆ.
2017ಕ್ಕೆ ಐಪಿಎಲ್ಗೆ ಎಂಟ್ರಿ ಕೊಟ್ಟ ಸಿರಾಜ್ ಮೊದಲ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. 2018ರಲ್ಲಿ ಆರ್‌ಸಿಬಿ ಸೇರಿದ್ದ ಸಿರಾಜ್ 2024ರವರೆಗೆ ಅಂದರೆ 7 ವರ್ಷಗಳ ಕಾಲ ಆರ್‌ಸಿಬಿ ಭಾಗವಾಗಿದ್ದರು. ಆದರೆ ಈ ಆವೃತ್ತಿಯಿಂದ ಸಿರಾಜ್‌ರನ್ನು ಕೈಬಿಡಲಾಗಿದೆ. ಇದೀಗ ಆರ್‌ಸಿಬಿ ವಿರುದ್ಧ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಸಿರಾಜ್ ಐಪಿಎಲ್ ದಾಖಲೆ: ಐಪಿಎಲ್ನಲ್ಲಿ ಈವರೆಗೂ 95 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 95 ವಿಕೆಟ್ಗಳನ್ನು ಪಡೆದಿದ್ದಾರೆ. 21 ರನ್ಗೆ 4 ವಿಕೆಟ್ ಪಡೆದಿದ್ದು ಇವರ ಬೆಸ್ಟ್ ಸ್ಪೆಲ್ ಆಗಿದೆ.