ಮೊಳಕಾಲ್ಮುರು:ಪಟ್ಟಣದ ಶ್ರೀನಿವಾಸ ನಾಯಕ ಬಡಾವಣೆಯ ಹಾಗೂ ಬೇಡರ ಕಣ್ಣಪ್ಪನ ಬೀದಿಯ ನಾಯಕ ಸಮುದಾಯ ಮತ್ತು ಇತರ ಸಮುದಾಯಗಳನ್ನು ಸೇರಿ ಬುಡಕಟ್ಟು ಸಂಸ್ಕೃತಿಯಲ್ಲೇ ಒಂದಾದ ಶ್ರೀ ಮಲೆಯಮ್ಮ ಹಾಗೂ ಗೌರಸಮುದ್ರ ಮಾರಮ್ಮಗಳ ಗಂಗಾ ಪೂಜೆಯು 3 ವರ್ಷಗಳಿಗೊಮ್ಮೆ ನಡೆಯುವುದು ಶಾಂತಿ ಸಮೃದ್ಧಿ ಹಾಗೂ ಮಕ್ಕಳಿಗೆ ಯಾವುದೇ ಕೆಡುಕು ಉಂಟಾಗದೆ ಹಾಗೆ ಒಳಿತು ಮಾಡುತ್ತಾಳೆ ಎಂದು ಹೇಳುತ್ತಾರೆ ಇಲ್ಲಿನ ಪೂಜಾರಿಗಳು. ಎರಡು ದೇವರುಗಳು ಸೇರಿ ಕೂತಲಗುಂದೆ ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಅಗ್ನಿಕುಂಡವನ್ನು ತುಳಿಯುವುದು ಇಲ್ಲಿನ ಸಂಸ್ಕೃತಿಯಾಗಿದೆ.

ಈ ರೀತಿ ಮಾಡುವುದರಿಂದ ಸುಖ ಶಾಂತಿ ಸಮೃದ್ಧಿ ಸಿಗುತ್ತದೆ ಎಂದು ಹಿಂದಿನ ಕಾಲದಿಂದಲೂ ನಡೆದುಕೊಂಡ ಪದ್ಧತಿಯಾಗಿದೆ .
ಈ ಸಂದರ್ಭದಲ್ಲಿ ಮುಖಂಡರುಗಳಾದ ಗುರುರಾಜ್, ರಮೇಶ್ ದಳವಾಯಿ, ಪಟ್ಟಣ ಪಂಚಾಯತಿ ಸದಸ್ಯರಾದ ಹೊಬಣ್ಣ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್, ಪೂಜಾರಿಗಳಾದ ಈರಣ್ಣ ಮಲ್ಲಿಕಾರ್ಜುನ್ ಪ್ರಕಾಶ್ ಇನ್ನು ಹಲವರು ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ :ಪಿಎಂ ಗಂಗಾಧರ್




