Ad imageAd image

ದಿಂಬಿನ ಕವರ್​ಗಳು​ ಎಷ್ಟು ದಿನಕ್ಕೆ ತೊಳಿಬೇಕು?

Bharath Vaibhav
ದಿಂಬಿನ ಕವರ್​ಗಳು​ ಎಷ್ಟು ದಿನಕ್ಕೆ ತೊಳಿಬೇಕು?
WhatsApp Group Join Now
Telegram Group Join Now

ದಿಂಬಿನ ಕವರ್​ನಲ್ಲಿ ಟಾಯ್ಲೆಟ್​ ಸೀಟ್​ನಲ್ಲಿರುವುದಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತೆ, ಎಷ್ಟು ದಿನಕ್ಕೆ ತೊಳಿಬೇಕು?
ದಿಂಬಿನ ಕವರ್​ನಲ್ಲಿ ಟಾಯ್ಲೆಟ್​ ಸೀಟಿನಲ್ಲಿರುವುದಕ್ಕಿಂತಲೂ 17 ಸಾವಿರ ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆ ಎನ್ನುವ ಮಾಹಿತಿ ಲಭ್ಯವಾಗಿದೆ. ನ್ಯಾಷನಲ್ ಸ್ಲೀಪ್ ಫೌಂಡೇಷನ್​ನ ವರದಿಯಲ್ಲಿ ಇದನ್ನು ಹೇಳಿದೆ.ದಿಂಬಿನ ಕವರ್​ಗಳು ಕೊಳಕಾದಂತೆಯೂ ಕಾಣುವುದಿಲ್ಲ ಆದರೂ ಅದರಲ್ಲಿ ಟಾಯ್ಲೆಟ್​ ಸೀಟ್​ನಲ್ಲಿರುವುದಕ್ಕಿಂತಲೂ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಎಲ್ಲರಿಗೂ ಅವರವರ ಆರೋಗ್ಯ(Health)ದ ಮೇಲೆ ಕಾಳಜಿ ಇದ್ದೇ ಇರುತ್ತದೆ, ಆದರೂ ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ತಪ್ಪಿನೊಂದ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಸಾಮಾನ್ಯವಾಗಿ 15 ದಿನಕ್ಕೊಮ್ಮೆಯಾದರೂ ಹಾಸಿಗೆಯ ಹೊದಿಕೆಯನ್ನು ತೊಳೆಯುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಆದರೆ ಹಾಸಿಗೆ ಮೇಲಿರುವ ದಿಂಬಿನ ಬಗ್ಗೆ ಯಾರಿಗೂ ಗಮನ ಹೋಗುವುದಿಲ್ಲ. ದಿಂಬಿನ ಕವರ್​ಗಳು ಕೊಳಕಾದಂತೆಯೂ ಕಾಣುವುದಿಲ್ಲ ಆದರೂ ಅದರಲ್ಲಿ ಟಾಯ್ಲೆಟ್​ ಸೀಟ್​ನಲ್ಲಿರುವುದಕ್ಕಿಂತಲೂ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ನ್ಯಾಷನಲ್ ಸ್ಲೀಪ್ ಫೌಂಡೇಷನ್​ನ ವರದಿಯಲ್ಲಿ ಇದನ್ನು ಹೇಳಲಾಗಿದ್ದು, ಎಬಿಪಿ ಲೈವ್ ವರದಿ ಮಾಡಿದೆ. ನಿಮ್ಮ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುವುದು, ತುರಿಕೆ ಬರುವುದು ಇದೆಲ್ಲವೂ ಈ ದಿಂಬಿನ ಕವರ್​ನಿಂದಾಗಿಯೇ ಆಗಿರುತ್ತದೆ. ದಿಂಬಿನ ಕವರ್​ಗಳು ಪ್ರತಿ ಇಂಚಿಗೆ ಮೂರರಿಂದ ಐದು ಮಿಲಿಯನ್ ಸಿಎಫ್​ಯು(colony-forming units)ವನ್ನು ಹೊಂದಿರುತ್ತವೆ. ಸಿಎಫ್​ಯು ಎಂಬುದು ಬ್ಯಾಕ್ಟೀರಿಯಾಗಳನ್ನು ಅಳೆಯಲು ಇರುವ ಮಾಪನ. ಎರಡೂ ಕಡೆಗಳನ್ನು ಲೆಕ್ಕ ಹಾಕಿದರೆ 12 ಮಿಲಿಯನ್​ಗಳಷ್ಟು ಸಿಎಫ್​ಯು ಅದರಲ್ಲಿರುತ್ತದೆ.

ಅದರಲ್ಲಿ ಗ್ರಾಮ್ ನೆಗೆಟಿವ್ ರಾಡ್ಸ್​, ಗ್ರಾಮ್ ಪಾಸಿಟಿವ್ ರಾಡ್ಸ್​, ಬೇಸಿಲ್ಲಿ, ಗ್ರಾಮ್ ಪಾಸಿಟಿವ್ ಕೋಸಿ ಸೇರಿದಂತೆ ಇತರೆ ಬ್ಯಾಕ್ಟೀರಿಯಾಗಳಿರುತ್ತವೆ. ವಾರಕ್ಕೊಮ್ಮೆ ದಿಂಬಿನ ಕವರ್​ಗಳನ್ನು ಸ್ವಚ್ಛಗೊಳಿಸಲೇಬೇಕು. ಟಾಯ್ಲೆಟ್​ ಸೀಟಿನ ಮೇಲಿರುವುದಕ್ಕಿಂದ 17 ಸಾವಿರ ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ಅದರಲ್ಲಿರುತ್ತವೆ.

ನೀವು ಒದ್ದೆ ಕೂದಲಿನಲ್ಲಿ ಮಲಗಿದರೆ ಮತ್ತಷ್ಟು ಅಪಾಯ ಬರುವುದು, ಏಕೆಂದರೆ ಒದ್ದೆಯಾಗಿರುವ ಕೂದಲಿನಿಂದ ತೇವಾಂಶವು ದಿಂಬಿನ ಮೇಲೆ ವರ್ಗಾವಣೆಯಾಗುತ್ತದೆ. ಅದರಲ್ಲಿ ಅನಗತ್ಯ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳಿಗೆ ಸೂಕ್ತ ವಾತಾವರಣ ನಿರ್ಮಿಸಿದಂತಾಗುತ್ತದೆ.

ಮಲಗುವ ಮುನ್ನ ಕೂದಲನ್ನು ಒಣಗಿಸಿ, ಎರಡನೆಯದು ವಾರಕ್ಕೊಮ್ಮೆ ದಿಂಬಿನ ಕವರ್​ಗಳನ್ನು ತೊಳೆಯಿರಿ ಎಂದು ತಜ್ಞರು ಹೇಳುತ್ತಾರೆ. ದಿಂಬಿನ ಹೊದಿಕೆಯನ್ನು ತೊಳೆಯುವುದರಿಂದ ನಿಮ್ಮ ಜೊಲ್ಲು, ಎಣ್ಣೆ,ಕೊಳಕು, ಬೆವರು ಶೇಖರಣೆಯಾಗುವುದನ್ನು ತಡೆಯುತ್ತದೆ. ಇಲ್ಲವಾದಲ್ಲಿ ಅದರಿಂದ ಕಿರಿಕಿರಿ ಅನುಭವಿಸುವಿರಿ. ಅದರಿಂದ ಉಸಿರಾಟದ ತೊಂದರೆ, ಅಲರ್ಜಿಗಳು ಉಂಟಾಗುವುದನ್ನು ಇಂದೇ ತಡೆಯಿರಿ. ಹಾಸಿಗೆ ಹೊದಿಕೆಗಿಂತ ಮೊದಲು ದಿಂಬಿನ ಕವರ್​ಗಳನ್ನು ಸ್ವಚ್ಛವಾಗಿಡುವ ಬಗ್ಗೆ ಗಮನಹಗರಿಸಿ.

WhatsApp Group Join Now
Telegram Group Join Now
Share This Article
error: Content is protected !!