ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದ ಶ್ರೀ ಪುಂಡಲೀಕ ಸೈದಪ್ಪ ಮಾದರ ಇವರಿಗೆ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ ಅಂಗವಾಗಿ ನೀಡುವ ರಾಜ್ಯ ಸರ್ಕಾರ ದಿಂದ ರಾಜ್ಯಮಟ್ಟದ ಪ್ರಶಸ್ತಿಗೆ ಹಲಗಿವಾದನ (ಕಲಾಕ್ಷೇತ್ರದಲ್ಲಿ) ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಥಣಿ ತಾಲೂಕ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರಾದ ಬಸವರಾಜ್ ಯಾದವಾಡ ಅವರು ಪ್ರಶಸ್ತಿ ಆಯ್ಕೆಯಾದ ಪುಂಡಲಿಕ್ ಮಾದರ ಅವರ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಏಪ್ರಿಲ್ 5 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಾಹಾದೇವಪ್ಪ ಮತ್ತು ಎಲ್ಲಾ ಸಚಿವರು. ಶಾಸಕರು ನೇತೃತ್ವದಲ್ಲಿ ವಿಧಾನಸೌಧ ಸಭಾಂಗಣದಲ್ಲಿ ಜರಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಫ್ ಡಿ ಸಿ ಚಂದ್ರು ಕಾಂಬಳೆ, ಲಕ್ಷ್ಮಣ್ ಜಯಗೋಡಿ ಹಿರಿಯ ಪತ್ರಕರ್ತರಾದ ಮಲಗೌಡ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.