ಯಳಂದೂರು : ಬೇಸಿಗೆ ರಜೆಯಲ್ಲಿ ಮಕ್ಕಳಕೊಂಡೋತ್ಸವ ಜಾಲತಾಣಗಳಲ್ಲಿ ಮಕ್ಕಳ ಮನರಂಜನೆ ಆಟ ನೋಡಿ ಜನರ ಮೆಚ್ಚುಗೆ.
ಬೇಸಿಗೆ ರಜೆ ಅಂದರೆ ಮಕ್ಕಳಿಗೆ ಇಷ್ಟ ಮಕ್ಕಳು ಹಳ್ಳಿಗಳಲ್ಲಿ ಅಜ್ಜಿಮನೆಗೆ ಹೋಗ್ತಾರೆ ಇನ್ನು ಪಟ್ಟಣದ ಕೆಲವು ಮಕ್ಕಳು ಪ್ರವಾಸ ಹೋಗ್ತಾರೆ, ಇನ್ನು ಕೆಲವರು ಡಾನ್ಸ್ ಸ್ಕೂಲ್, ಕರಾಟೆ ಶಾಲೆ, ಸ್ಪೋರ್ಟ್ಸ್ ಸ್ಕೂಲ್ ಗಳಿಗೆ ಸೇರ್ಕೋತಾರೆ ಆದರೆ ಹಳ್ಳಿಯ ಭಾಗದಲ್ಲಿ ಮಕ್ಕಳು ಕ್ರಿಕೆಟ್, ಕಬ್ಬಡಿ, ವಾಲಿಬಾಲ್, ಕುಂಟೆಬಿಲ್ಲೆ, ಗ್ರಾಮೀಣ ಮನರಂಜನೆಯ ಆಟಗಳನ್ನು ಆಡಿ ಬೇಸಿಗೆಯ ರಜೆಯನ್ನು ಸಂತಸ ಪಡುತಿದ್ದರೆ.
ಆದರೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೋಕು ವೈ ಕೆ ಮೋಳೆ ಗ್ರಾಮದಲ್ಲಿ ಕೆಲವು ಮಕ್ಕಳು ಊರಿನಲ್ಲಿ ಆಚರಿಸುವ ಹಬ್ಬದ ಮಾದರಿಯಲ್ಲಿ ಮಕ್ಕಳೆಲ್ಲ ಸೇರಿ ಕೊಂಡೋತ್ಸವ ಮಾಡಿಕೊಂಡು ಬೇಸಿಗೆ ರಜೆಯನ್ನು ಎಂಜಾಯ್ ಮಾಡುತಿದ್ದರೆ ಈ ದೃಶ್ಯಗಳು ಇವಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದೆ ಈ ಮಕ್ಕಳು ವಿಡಿಯೋ ನೋಡಿ ಎಲ್ಲಾರು ಜಾಲತಾಣಗಲಿ ಮೆಚ್ಚುಗೆ ನೀಡಿದರೆ.
ವರದಿ : ಸ್ವಾಮಿ ಬಳೇಪೇಟೆ