ಕೋಲ್ಕತ್ತಾ: ಶ್ರೀಲಂಕಾದ ಬೌಲರ್ ಓರ್ವ ಕಳೆದ ರಾತ್ರಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸ್ ಹೈದರಾಬಾದ್ ನಡುವನ ಪಂದ್ಯದಲ್ಲಿ ತಮ್ಮ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದರು. ಈ ಆಟಗಾರ ವಿಶೇಷತೆಯೊಂದಿಗೆ ಗಮನ ಸೆಳೆದರು.
ಕಮಿಂಡು ಮೆಂಡಿಸ್ ಹೆಸರಿನ ಈ ಆಟಗಾರ 26 ವರ್ಷ ವಯಸ್ಸಿನ ಯುವ ಆಲರೌಂಡರ್. ಈ ಬೌಲರ್ ನ ವಿಶೇಷತೆ ಏನೆಂದರೆ ಈತ ೆರಡೂ ಕೈಗಳಿಂದ ಬೌಲಿಂಗ್ ಮಾಡುತ್ತಾರೆ. ಬಲಗೈನಿಂದ ಆಫ್ ಸ್ಪೀನ್ ಹಾಗೂ ಎಡಗೈನಿಂದ ಅರ್ತೂಡೆಕ್ಸ್ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಈ ಬಗೆಯ ಆಟಗಾರರು ಇರುತ್ತಾರೆ. ಅದರಲ್ಲಿ ಇವರು ಒಬ್ಬರು. ಬ್ಯಾಟಿಂಗ್ ನಲ್ಲಿ ಬಲಗೈ ಆಟಗಾರ ರೀವರ್ಸ್ ಸ್ಪೀಪ್ ಮಾಡುವುದನ್ನು, ಸ್ವೀಚ್ ಹಿಟ್ ಮಾಡುವುದನ್ನು ನೋಡಿದ್ದೇವೆ.
ಆದರೆ ಕಮಿಂಡು ಮೆಂಡಿಸ್ ಒಂದೊಂದು ಕೈಯಿಂದ ವಿಭಿನ್ನ ಬಗೆಯ ಬೌಲಿಂಗ್ ಮಾಡುವುದು. ಮತ್ತೊಂದು ವಿಶೇಷ. ಈಚೆಗೆ ಶ್ರೀಲಂಕಾ ಪರವಾಗಿ ಆಡಿರುವ ಈ ಯುವ ಬೌಲರ್ ಅಷ್ಟೇನೂ ಯಶಸ್ಸು ಗಳಿಸಿಲ್ಲವಾದರೂ ವಿವಿಧತೆಯಿಂದ ಗಮನ ಸೆಳೆದಿದ್ದಾರೆ. ಅವರು ನಿನ್ನೆಯ ಪಂದ್ಯದ ಮೊದಲ ಓವರ್ ನಲ್ಲಿ ವಿಕೆಟ್ ಪಡೆಯಲು ಯಶಸ್ವಿಯಾದರು.
ನಮ್ಮ ಭಾರತದಲ್ಲಿಯೂ ಈ ಬಗೆಯ ಬೌಲರ್ ವೊಬ್ಬರು ಇದ್ದರು. ಅವರು ತಮಿಳುನಾಡಿನ ಬೌಲರ್. ಅವರ ಹೆಸರು ದಿವಾಕರ ವಾಸು. ದಿವಾಕರ ವಾಸು ಎಡಗೈ ಯಿಂದ ಮಧ್ಯಮ ವೇಗದ ಬೌಲಿಂಗ್ ಮಾಡುತ್ತಿದ್ದರು. ಬಲಗೈ ಇಂದ ಆಪ್ ಸ್ಪಿನ್ನರ್ ಆಗಿದ್ದರು. ಅವರು ಕೂಡ ಆಲರೌಂಡರ್ ಹಾಗೂ ಉತ್ತಮ ಕ್ಷೇತ್ರ ರಕ್ಷಕ ಕೂಡ ಆಗಿದ್ದರು.