ನಿಪ್ಪಾಣಿ : ಮಿತ ಖರ್ಚು ಪಾರದರ್ಶಕ ಆಡಳಿತ, ಗ್ರಾಹಕರಿಗೆ , ಠೇವುದಾರರಿಗೆ ಸಕಾಲಕ್ಕೆ ಸೇವೆ ಒದಗಿಸುವುದರೊಂದಿಗೆ ನಿರಂತರ ಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರು ಶ್ರಮಿಸಿದ್ದರಿಂದ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಶ್ರೀ ವೀರಾಚಾರ್ಯ ಅಲ್ಪಸಂಖ್ಯಾತರ ಸೌಹಾರ್ದ ವಿವಿಧ ಉದ್ದೇಶಗಳ ಸಹಕಾರಿ ಸಂಘಕ್ಕೆ ಕಳೆದ ಆರ್ಥಿಕ ವರ್ಷದಲ್ಲಿ 75 ಲಕ್ಷ 4 ಸಾವಿರ ರೂಪಾಯಿ ನಿವ್ವಳ ಲಾಭ ಬಂದಿರುದಾಗಿ ಸಂಸ್ಥೆಯ ಸಂಸ್ಥಾಪಕ ಬಾಳಾಸಾಹೇಬ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆಯ ಕಾರ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾರಂಭದಲ್ಲಿ ಸಂಘದ ಮುಖ್ಯ ವ್ಯವಸ್ಥಾಪಕ ಪ್ರವೀಣ್ ಪಾಟೀಲ ಮಾತನಾಡಿ ಸಂಸ್ಥೆ ಕಳೆದ ಎರಡು ದಶಕಗಳಿಂದ ನಿರಂತರ ಪಾರದರ್ಶಕ ಆಡಳಿತ ಹಾಗೂ ಗ್ರಾಹಕರಿಗೆ ತತ್ಪರಸೇವೆ ನೀಡುವುದರೊಂದಿಗೆ ಸಂಘದಿಂದ ಸಕಲ ಸೌಲಭ್ಯಗಳನ್ನು ಒದಗಿಸುತ್ತಿದ್ದು ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ಇದೇ ವೇಳೆ ಸಂಸ್ಥಾಪಕ *ಬಾಳಾಸಾಹೇಬ ಪಾಟೀಲ ಸಂಸ್ಥೆಯ ಪ್ರಗತಿ ಕುರಿತು ಮಾತನಾಡಿ ಸಂಸ್ಥೆಯು ಕಳೆದ ಆರ್ಥಿಕ ವರ್ಷದಲ್ಲಿ 863 ಸದಸ್ಯರನ್ನು ಹೊಂದಿದ್ದು ಶೇರ ಬಂಡವಾಳ 32 ಲಕ್ಷ ರೂಪಾಯಿ ಠೇವು 31 ಕೋಟಿ 24 ಲಕ್ಷ ನಿಧಿಗಳು 4 ಕೋಟಿ 58 ಲಕ್ಷ ಗುಂತಾವನೆ 18 ಕೋಟಿ 24 ಲಕ್ಷ ಇದ್ದು ಸಂಸ್ಥೆಯ ಸದಸ್ಯರಿಗೆ 17 ಕೋಟಿ 11 ಲಕ್ಷ ರೂಪಾಯಿ ಸಾಲ ನೀಡಿ 153 ಕೋಟಿ ರೂಪಾಯಿಗಳ ವಾರ್ಷಿಕ ವ್ಯವಹಾರದೊಂದಿಗೆ ಸದಸ್ಯರಿಂದ ಸಕಾಲಕ್ಕೆ ಸಾಲ ಮರುಪಾವತಿಸಿಕೊಂಡಿದ್ದರಿಂದ ಸಂಸ್ಥೆಗೆ ಈ ಬಾರಿ ದಾಖಲೆ 75 ಲಕ್ಷ 4ಸಾವಿರ ರೂಪಾಯಿ ಲಾಭ ಬಂದಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಪಾಟೀಲ ಉಪಾಧ್ಯಕ್ಷ ಸಿದ್ದಗೌಡ ಕೆಸ್ತೆ ನಿರ್ದೇಶಕರಾದ ಸಂಜಯ್ ಪಾಟೀಲ್ ಮಹಾವೀರ ಹಿರುಕುಡೇ ಪ್ರಕಾಶ್ ತಾರದಾಳೇ ಅಜಿತ ಪಾಟೀಲ ಸಂಜಯ ಅಲಗುರೆ ಉತ್ತಮ ಸಮಗೆ ,ಸಂಜಯ ಮಗದುಮ, ಅಭಯ ಭಾಗಾಜೆ ಮಹಾವೀರ ಧನಾಪಗೋಳ ಉತ್ತಮ ಹೆಬ್ಬಾಲೆ ಸವಿತಾ ಪಾಟೀಲ ನಿತಿನ ವನಕುದ್ರೆ ರವಿರಾಜ ಪಾಟೀಲ್ ಸೇರಿದಂತೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಪ್ರವೀಣ್ ಪಾಟೀಲ್ ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ