Ad imageAd image

ಟೀಚರ್ ಹೊಡೆತಕ್ಕೆ ಕಣ್ಣು ಕಳೆದುಕೊಂಡ ಒಂದನೇ ತರಗತಿ ಬಾಲಕ

Bharath Vaibhav
ಟೀಚರ್ ಹೊಡೆತಕ್ಕೆ ಕಣ್ಣು ಕಳೆದುಕೊಂಡ ಒಂದನೇ ತರಗತಿ ಬಾಲಕ
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ: ಒಂದನೇ ತರಗತಿ ವಿದ್ಯಾರ್ಥಿ ಕಣು ಕಳೆದುಕೊಂಡು ಹಿನ್ನೆಲೆ ಬಾಲಕನ ತಂದೆ ತಾಯಿ ನ್ಯಾಯಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಕೂತ ಘಟನೆ ಚಿಂತಾಮಣಿ ನಗರದಲ್ಲಿ ಶುಕ್ರವಾರ  ನಡೆದಿದೆ.

ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿ ವ್ಯಾಪ್ತಿಯ ಯಗವಕೋಟೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಟರಾಜ್ – ಅಂಜಲಿ ದಂಪತಿಗಳ ಪುತ್ರನಾದ ಯಶ್ವಂತ್ (8 ವರ್ಷ) ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಶಾಲೆಯ ಶಿಕ್ಷಕಿ ಸರಸ್ಕೃತಿ ಕೂಲಿನಿಂದ ಬೇರೆ ಬಾಲಕನಿಗೆ ಹೊಡೆಯಲು ಹೋಗಿ ಯಂತ್ ಕಣ್ಣಿಗೆ ಕೋಲು ಬಿದ್ದಿದೆ. ಪರಿಣಾಮ ಬಲಭಾಗದ ಕಣ್ಣಿಗೆ ಹಾನಿಯಾಗಿದೆ.

ಕೂಡಲೇ ಪೋಷಕರು ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಕೊನೆಗೆ ವೈದ್ಯರು ಬಾಲಕನ ಕಣ್ಣು ಕಾಣುವುದಿಲ್ಲ ಎಂದು ದೃಢಕರಿಸಿದ ಹಿನ್ನೆಲೆ ಪೋಷಕರು ಶಿಕ್ಷಕಿಯ ವಿರುದ್ಧ ಪೊಲೀಸ್ ಠಾಣೆಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಯಾವುದೇ ರೀತಿಯ ಕ್ರಮ ಜರುಗಿಸದ ಕಾರಣಕ್ಕೆ ನ್ಯಾಯಕ್ಕಾಗಿ ಕಣ್ಣು ಕಳೆದುಕೊಂಡ ಬಾಲಕ ಹಾಗೂ ಅವರ ತಂದೆ ತಾಯಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಕೂತಿದ್ದಾರೆ .

ಶಿಕ್ಷಕಿಯ ಮೇಲೆ ಕ್ರಮ ಜರುಗಿಸುವವರೆಗೂ ನಾವು ಕಾನೂನು ಹೋರಾಟ ಮಾಡುವುದಾಗಿ ಅವರು ತಿಳಿಸಿದರು.

WhatsApp Group Join Now
Telegram Group Join Now
Share This Article
error: Content is protected !!