ಬೆಳಗಾವಿ: ರಾಜ್ಯದೆಲ್ಲೆಡೆಯಂತೆ ಬೆಳಗಾವಿ ಜಿಲ್ಲೆಯಲ್ಲಿಯೂ ಎಸ್ ಎಸ್ಎಲ್ ಸಿ ಪರೀಕ್ಷೆ ಮುಗಿದಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿರಾಳರಾಗಿದ್ದಾರೆ.
ಶುಕ್ರವಾರ ಇಂದು ಹಿಂದಿ ಭಾಷೆಯ ಪರೀಕ್ಷೆಯನ್ನು ಬರೆಯುವುದರ ಮೂಲಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಿಲ್ಯಾಕ್ಸ ಆಗಿದ್ದಾರೆ. ಇನ್ನೆನಿದ್ದರೂ ಫಲಿತಾಂಶದ ಚಿಂತೆ. ಅದಕ್ಕಿಂತ ಮುಂಚೆ, ಓದಿ ಓದಿ ಬೇಸತ್ತ ವಿದ್ಯಾರ್ಥಿಗಳು ಆಟದತ್ತ ಗಮನ ಹರಿಸುವುದು ಮಾಮೂಲಿ. ಪರೀಕ್ಷೆ ಫಲಿತಾಂಶದ ನಂತರ ತಮ್ಮ ಮುಂದಿನ ಶಿಕ್ಷಣದ ಚಿಂತೆ ಇರುವುದು ಸಾಮಾನ್ಯ.
ಕೆಲವು ವಿದ್ಯಾರ್ಥಿಗಳು, ವಿದ್ಯಾರ್ಥಿ ಪಾಲಕರು ಮುಂದಿನ ಶಿಕ್ಷಣದ ನಿರ್ಧಾರ ಮಾಡುವುದನ್ನು ಫಲಿತಾಂಶದವರೆಗೆ ಕಾಯ್ದಿರಿಸಿರುತ್ತಾರೆ. ಸದ್ಯಕ್ಕಂತೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆ ಒತ್ತಡದಿಂದ ನಿರಾಳರಾದದ್ದು ಸತ್ಯ.