ದಿನಾ ಈ ನಾಯಿಗಳು ಬೊಗಳುತ್ತವೆ ಸುಮ್ನೆ ಕಿರಿ ಕಿರಿ ಎಂದು 25 ನಾಯಿಗಳಿಗೆ ವಿಷ ಹಾಕಿ ಕೊಂದ ವ್ಯಕ್ತಿ
ಎಲ್ಲರಿಗೂ ಹೇಗೆ ಅವರವರ ಕೆಲಸವಿರುತ್ತದೆಯೋ ಹಾಗೆಯೇ ಬೊಗುಳುವುದು ನಾಯಿ ಕಾಯಕ, ಹಾಗೆಂದ ಮಾತ್ರಕ್ಕೆ ನಾಯಿಗಳನ್ನು ಕೊಲ್ಲಬೇಕೇ? ಹೀಗೊಂದು ಚರ್ಚೆ ಹುಟ್ಟಿಕೊಂಡಿದೆ. ಮಹಾರಾಷ್ಟ್ರದ ಅಕೋಲಾದಲ್ಲಿ ದಿನಾ ನಾಯಿಗಳು ಬೊಗುಳುತ್ತವೆ ಕಿರಿ ಕಿರಿ ಎಂದು ವ್ಯಕ್ತಿಯೊಬ್ಬ 25 ನಾಯಿಗಳಿಗೆ ವಿಷ ಹಾಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.ವಿಷಪೂರಿತ ಆಹಾರವನ್ನು ಸೇವಿಸಿದ 24 ಗಂಟೆಗಳಲ್ಲಿ 25 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿವೆ, ಆದರೆ ಕೆಲವು ಇನ್ನೂ ಗಂಭೀರ ಸ್ಥಿತಿಯಲ್ಲಿವೆ.
ಇದಕ್ಕಿಂತಾ ಕ್ರೂರತೆ ಬೇರೆ ಇದೆಯೇ, ನಾಯಿ(Dog) ಬೊಗಳುತ್ತವೆ ಕಿರಿ ಕಿರಿ ಎಂದು 25 ನಾಯಿಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿದೆ. ಈ ಘಟನೆಯ ನಂತರ, ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸತ್ತ ನಾಯಿಗಳಲ್ಲಿ ಬೀದಿ ನಾಯಿಗಳು ಹಾಗೂ ಸಾಕು ನಾಯಿಗಳು ಸೇರಿವೆ.
25ಕ್ಕೂ ಹೆಚ್ಚು ನಾಯಿಗಳು ಸತ್ತಿವೆ
ಈ ಆಘಾತಕಾರಿ ಘಟನೆ ಅಕೋಲಾ ನಗರದ ಪಕ್ಕದಲ್ಲಿರುವ ಗುಡ್ಡಿ ಪ್ರದೇಶದಲ್ಲಿ ನಡೆದಿದೆ. ತಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೀದಿ ನಾಯಿಗಳು ನಮ್ಮನ್ನು ನೋಡಿ ಬೊಗಳುತ್ತವೆ ಎನ್ನುವ ಈ ಕ್ಷುಲ್ಲಕ ಕಾರಣಕ್ಕಾಗಿ, ಅಪರಿಚಿತ ವ್ಯಕ್ತಿಯೊಬ್ಬ ಈ ಮೂಕ ಪ್ರಾಣಿಗಳಿಗೆ ವಿಷ ನೀಡಿ ಕೊಂದಿದ್ದಾನೆ. ವಿಷಪೂರಿತ ಆಹಾರವನ್ನು ಸೇವಿಸಿದ 24 ಗಂಟೆಗಳಲ್ಲಿ 25 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿವೆ, ಹಾಗೆಯೇ ಕೆಲವು ಇನ್ನೂ ಗಂಭೀರ ಸ್ಥಿತಿಯಲ್ಲಿವೆ.
ಸಿಸಿಟಿವಿಯಲ್ಲಿ ಬಯಲಾದ ಕೃತ್ಯ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪ್ರದೇಶದ ನಿವಾಸಿಗಳು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯ ನಂತರ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು. ಘಟನೆಯ ತನಿಖೆಗಾಗಿ ಸ್ಥಳೀಯರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸರು ಪ್ರಸ್ತುತ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.
ಉಮ್ರಿ ವಾರ್ಡ್ ನಿವಾಸಿ ಸಂದೀಪ್ ಗವಾಂಡೆ ಈ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ, ಈ ಕುರಿತು ಟಿವಿ9 ಮರಾಠಿಯೊಂದಿಗೆ ಮಾತನಾಡಿರುವ ಅವರು, ಇದು ಅತ್ಯಂತ ಖಂಡನೀಯ ಘಟನೆ. ಈ ರೀತಿ ಮುಗ್ಧ ಪ್ರಾಣಿಗಳನ್ನು ಕೊಲ್ಲುವುದು ಕ್ರೌರ್ಯದ ಸಂಕೇತ. ಆಡಳಿತವು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಈ ಘಟನೆಯು ಅಕೋಲಾ ನಗರದಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕೊಲೆಗಾರನ ಬಗ್ಗೆ ನಾಗರಿಕರಲ್ಲಿ ತೀವ್ರ ಕೋಪವೂ ಇದೆ. ಈ ಪ್ರಕರಣದಲ್ಲಿ ಪೊಲೀಸರು ಈಗ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.