ಜೈ ಜಿನೇಂದ್ರ ಕ್ರೆಡಿಟ್ ಸೌಹಾರ್ದ ಸಂಸ್ಥೆಗೆ 1ಕೋಟಿ 16ಲಕ್ಷ ರೂಪಾಯಿ ಲಾಭ ಸಂಸ್ಥೆಯ ಅಧ್ಯಕ್ಷ ಬಾಬಣ್ಣ ಖೋತ ರಿಂದ ಮಾಹಿತಿ.
ಚಿಕ್ಕೋಡಿ :ತಾಲೂಕಿನ ಶಮನೆವಾಡಿ ಗ್ರಾಮದ ಜೈ ಜಿನೇಂದ್ರ ಕ್ರೆಡಿಟ್ ಸೌಹಾರ್ದ ಸಂಸ್ಥೆಗೆ ಕಳೆದ ಆರ್ಥಿಕ ವರ್ಷದಲ್ಲಿ 1 ಕೋಟಿ 16 ಲಕ್ಷ ರೂಪಾಯಿ ಲಾಭ ಬಂದಿರುವುದಾಗಿ ಸಂಸ್ಥೆಯ ಅಧ್ಯಕ್ಷ ಬಾಬಣ್ಣ ಖೋತ ತಿಳಿಸಿದರು. ಸಂಸ್ಥೆಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸ್ಥೆಯ ಸದಸ್ಯರ ಸಹಕಾರ,ಸಾಲುಗಾರರು ಸಕಾಲಕ್ಕೆ ಸಾಲ ಮರುಪಾವತಿಸಿದ್ದರಿಂದ ಹಾಗೂ ನಮ್ಮ ಸಂಸ್ಥೆಯ ಸಿಬ್ಬಂದಿ ವರ್ಗದವರಿಂದ ತತ್ಪರ ಸೇವೆ ಠೇವುದಾರರು ಸಾಲಗಾರರು ಹಾಗೂ ಸಂಸ್ಥೆಯ ಗ್ರಾಹಕರೊಂದಿಗೆ ವಿನಮ್ರ ಸೇವೆ ಸಲ್ಲಿಸುತ್ತಿರುವುದರಿಂದ ಸಾಲು-ವಸುಲಾತಿಗೆ ಸಹಕಾರಿಯಾಗುತ್ತಿದೆ ಎಂದರು.
ಇದೆ ವೇಳೆಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಕುಮಾರ್ ಗಾಡವೆ ಆರ್.ಬಿ. ಖೋತ ಸರ್ ಮಾತನಾಡಿ ಕಳೆದ ಮೂರುವರೆ ದಶಕಗಳ ಕಾಲಾವಧಿಯಲ್ಲಿ ಸಂಸ್ಥೆಯು ಆರ್ಥಿಕ ಸಮೃದ್ಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಿಖರ ಮಟ್ಟಕ್ಕೆ ತಲುಪಿದ್ದು ಮುಂಬರುವ ವರ್ಷದಲ್ಲಿ ದಾಖಲೆ ಠೇವು ಹಾಗೂ 200 ಕೋಟಿ ರೂಪಾಯಿಗಳತ್ತ ವಾರ್ಷಿಕ ವ್ಯವಹಾರವನ್ನು ಮಾಡಲು ಹೆಜ್ಜೆ ಹಾಕುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಬಾಬಾಸಾಬ ಖೋತ ಸಂಸ್ಥೆಯ ಆರ್ಥಿಕ ಸ್ಥಿತಿ ವಿವರಿಸಿದರು ಸಂಸ್ಥೆಯು ಕಳೆದ ಆರ್ಥಿಕ ವರ್ಷದಲ್ಲಿ 1363 ಸದಸ್ಯರನ್ನು ಹೊಂದಿದ್ದು 49 ಲಕ್ಷ 35 ಸಾವಿರ ರೂಪಾಯಿ ಶೇರ್ ಬಂಡವಾಳ.9 ಕೋಟಿ 42 ಲಕ್ಷ ರೂಪಾಯಿ ನಿಧಿ, 27 ಕೋಟಿ 93 ಲಕ್ಷ ರೂಪಾಯಿ ಠೇವ ಸಂಗ್ರಹಿಸಿದ್ದು ಸಂಸ್ಥೆಯ ಸದಸ್ಯರಿಗೆ 18 ಕೋಟಿ 10 ಲಕ್ಷ ರೂಪಾಯಿ ಸಾಲ ವಿತರಿಸಿ ಸಕಾಲಕ್ಕೆ ಮರು ಪಾವತಿಸಿಕೊಂಡಿದ್ದರಿಂದ ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆಗೆ ದಾಖಲೆ 1 ಕೋಟಿ 16 ಲಕ್ಷ ರೂಪಾಯಿ ಲಾಭ ಬಂದಿರುವುದಾಗಿ ತಿಳಿಸಿದರು. ಪಾರದರ್ಶಕ ಆಡಳಿತ ಗ್ರಾಹಕರಿಗೆ ಸಕಾಲಕ್ಕೆ ಸೇವೆ ಒದಗಿಸುತ್ತಿರುವುದರಿಂದ ಸಂಸ್ಥೆಗೆ ಲೆಕ್ಕಪರಿಶೋಧನೆಯಲ್ಲಿ ನಿರಂತರ ಅಡಿಟ್ ಅ ವರ್ಗ ಸಂಪಾದಿಸುತ್ತಿರುವುದಾಗಿ ತಿಳಿಸಿದರು .
ಉಪಾಧ್ಯಕ್ಷ ಧನಪಾಲ ಧನಾಪಗೊಳ ನಿರ್ದೇಶಕರಾದ ಉದಯ ತಪಕಿರೆ ಕುಮಾರ ಬೋನೆ ಆದಿತ್ಯ ಖೋತ ಸತೀಶ ಸೋನವನೆ ಸೇರಿದಂತೆ ಸರ್ವ ಸಂಚಾಲಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ