ಭದ್ರಾದ್ರಿ ಕೊತಗುಡೆಂ (ತೆಲಂಗಾಣ) : ತೆಲಂಗಾಣದ ಪ್ರಸಿದ್ಧ ದರ್ಗಾವೊಂದರಲ್ಲಿ ಭಾನುವಾರ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಸತ್ಯನಾರಾಯಣಪುರಂ ಸಮೀಪದ ಅರಣ್ಯ ಪ್ರದೇಶದಲ್ಲಿರುವ ಹಜರತ್ ಖಾಸಿಂ ದುಲ್ಹಾ ನಾಗುಲ್ ಮೀರಾ ದರ್ಗಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಈ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಿಂದೂ – ಮುಸ್ಲಿಂ ಬಾಂಧವರು ಒಟ್ಟಾಗಿ ಭಾಗಿಯಾಗುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು. ಭಾನುವಾರ ಅಭಿಜಿತ್ ಲಗ್ನದಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವಕ್ಕೂ ಮುನ್ನ ಸರ್ವರಿಂದ ವೇದ ಮಂತ್ರಗಳ ಪಠಣ ನಡೆಯಿತು.
ಅನೇಕ ಹಿಂದೂ ಮತ್ತು ಮುಸ್ಲಿಂ ಬಾಂಧವರು ಭಾಗಿಯಾಗಿ ಶ್ರೀರಾಮನನ್ನು ಭಕ್ತಿಯಿಂದ ಪೂಜಿಸಿದರು. ಲಕ್ಷ್ಮಿನಾರಾಯಣ ಅವರು ಸೀತಾರಾಮ ಕಲ್ಯಾಣೋತ್ಸವದ ನೇತೃತ್ವ ವಹಿಸಿಕೊಂಡಿದ್ದರು. ಧಾರ್ಮಿಕ ಸಾಮರಸ್ಯದ ಸಂಕೇತವಾದ ನಾಗುಲ್ ಮೀರಾ ದರ್ಗಾದಲ್ಲಿ ಪ್ರತಿ ವರ್ಷ ಜಾತಿ – ಧರ್ಮವನ್ನು ಭಗವಾನ್ ಶ್ರೀ ರಾಮನ ಜನ್ಮದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ಕಳೆದ 40 ವರ್ಷಗಳಿಂದ ಇದೇ ರೀತಿ ಎರಡೂ ಸಮುದಾಯವರು ಸೇರಿಕೊಂಡು ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ.