ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಏಪ್ರಿಲ್ 5ರಂದು ತಮ್ಮ 29ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅಂದು, ಅಪಾರ ಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಶುಭಾಶಯ ಕೋರಿದ್ದರು. ಇದೀಗ, ಫ್ಯಾನ್ಸ್ಗೆ ತಮ್ಮ ಬರ್ತ್ಡೇ ಸೆಲೆಬ್ರೇಶನ್ನ ಒಂದು ನೋಟವನ್ನೊದಗಿಸಿದ್ದಾರೆ ಸಿಕಂದರ್ ಸುಂದರಿ.
ಹೌದು, ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸಿಕಂದರ್ ನಟಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಬ್ಲ್ಯೂ ಫ್ರಾಕ್ ಧರಿಸಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಕಿರಿಕ್ ಪಾರ್ಟಿ ಬೆಡಗಿ. ಕಡಲ ತೀರದಲ್ಲಿ ಬರ್ತ್ಡೇ ಸೆಲೆಬ್ರೇಶನ್ ಅರೇಂಜ್ಮೆಂಟ್ ಒಂದು ಸಣ್ಣ ಲುಕ್ ಈ ವಿಡಿಯೋದಲ್ಲಿ ಸಿಕ್ಕಿದೆ. ಫ್ಲವರ್ಸ್, ಲೈಂಟಿಂಗ್ಸ್ ಕಡಲ ತೀರವನ್ನು ಮತ್ತಷ್ಟು ಚೆಂದಗೊಳಿಸಿದೆ. ನಟಿ, ‘ಹ್ಯಾಪಿ ಬರ್ತ್ಡೇ ಟು ರಶಿ’ ಎಂದು ಮಗುವಿನಂತೆ ವರ್ತಿಸಿದ್ದಾರೆ. ಡ್ಯಾನ್ಸ್ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ಕ್ಯೂಟ್ ಎಂದು ಗುಣಗಾನ ಮಾಡುತ್ತಿದ್ದಾರೆ.