ತುರುವೇಕೆರೆ: ತಾಲ್ಲೂಕು ಬ್ರಾಹ್ಮಣ ಸಭಾ, ಶ್ರೀ ಲಲಿತಾ ವಿಪ್ರ ಮಹಿಳಾ ಮಂಡಳಿ, ವಿಪ್ರ ನೌಕರರ ಸಂಘ, ವಿಪ್ರ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 06 ರಿಂದ ಏಪ್ರಿಲ್ 15 ರವೆರೆಗೆ ಪಟ್ಟಣದ ಶ್ರೀ ಗಾಯತ್ರಿ ಸಮುದಾಯ ಭವನದಲ್ಲಿ ಶ್ರೀ ರಾಮೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು, ಭಜನೆ ಕಾರ್ಯಕ್ರಮಗಳು ನೆರವೇರಲಿದೆ.
ಏಪ್ರಿಲ್ 06 ರಂದು ಭಾನುವಾರ ಶ್ರೀ ರಾಮನವಮಿ ಪ್ರಯುಕ್ತ ಶ್ರೀರಾಮದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಸಹಸ್ರನಾಮ, ಪಾರಾಯಣ ಸೇರಿದಂತೆ ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಿ ಭಕ್ತಾಧಿಗಳಿಗೆ ಪಾನಕ, ಫಲಹಾರ ವಿತರಿಸಲಾಯಿತು. ಏಪ್ರಿಲ್ 07 ರಿಂದ ಏಪ್ರಿಲ್ 14 ರವರೆಗೆ ಪ್ರತಿ ದಿನ ಬೆಳಿಗ್ಗೆ ವಿಪ್ರ ಬಾಂದವರಿಂದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಭಾವಚಿತ್ರ ಮೆರವಣಿಗೆಯೊಂದಿಗೆ ಭಜನೆ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರತಿದಿನ ಸಂಜೆ 6.30 ಕ್ಕೆ ಶ್ರೀ ಲಲಿತಾ ವಿಪ್ರ ಮಹಿಳಾ ಮಂಡಳಿಯಿಂದ ಗಾಯತ್ರಿ ಭವನದಲ್ಲಿ ಭಜನೆ, 7 ಗಂಟೆಗೆ ಉಪನ್ಯಾಸ ಮಾಲಿಕೆ, ೮ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮವಿರುತ್ತದೆ.
ಏಪ್ರಿಲ್ 15 ರಂದು ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವವನ್ನು ಏರ್ಪಡಿಸಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀರಾಮ ದೇವರ ಉತ್ಸವ, ದೇವರಿಗೆ ಷೋಡಷೋಪಚಾರ ಪೂಜೆ, ಬ್ರಾಹ್ಮಣ ಸುವಾಸಿನಿಯರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮಹೋತ್ಸವದಲ್ಲಿ ತಾಲ್ಲೂಕಿನ ಎಲ್ಲಾ ವಿಪ್ರ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಾಲ್ಲೂಕು ಬ್ರಾಹ್ಮಣ ಸಭಾ ಕೋರಿದೆ.
ಇದೇ ಸಂದರ್ಭದಲ್ಲಿ ಮೇ 02 ರಂದು ಶುಕ್ರವಾರ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಂದು ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉಪನಯನ ಮಾಡುವಂತಹವರು ಏಪ್ರಿಲ್ 25 ರ ಒಳಗೆ ತಮ್ಮ ಹೆಸರುಗಳನ್ನು ತಾಲ್ಲೂಕು ಬ್ರಾಹ್ಮಣ ಸಭಾದಲ್ಲಿ ನೋಂದಾಯಿಸಿಕೊಳ್ಳಲು ವಿನಂತಿಸಲಾಗಿದೆ.
ಮೊದಲ ದಿನದ ಭಜನಾ ಕಾರ್ಯಕ್ರಮದಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾದ ರಂಗನಾಥ್, ರಾಮಚಂದ್ರ, ಟಿ.ಆರ್.ಶ್ರೀನಿವಾಸ್, ಕೆ.ಸತ್ಯನಾರಾಯಣ್, ನಂಜುಂಡಸ್ವಾಮಿ, ಗಿರೀಶ್ ಕೆ ಭಟ್, ಪ್ರಾಣೇಶ್, ವಿಶ್ವನಾಥ್, ಲಕ್ಷ್ಮೀನಾರಾಯಣ್, ಪ್ರಮಥ್ ವಸಿಷ್ಠ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್