Ad imageAd image

ಮದುವೆ ಬಳಿಕ  ಇಲ್ಲಿ ವಧು-ವರರನ್ನು ಹೆಲಿಕ್ಯಾಪ್ಟರನ್ ಲ್ಲೇ ಕರೆದೊಯ್ಯಬೇಕಂತೆ

Bharath Vaibhav
ಮದುವೆ ಬಳಿಕ  ಇಲ್ಲಿ ವಧು-ವರರನ್ನು ಹೆಲಿಕ್ಯಾಪ್ಟರನ್ ಲ್ಲೇ ಕರೆದೊಯ್ಯಬೇಕಂತೆ
WhatsApp Group Join Now
Telegram Group Join Now

ನುಹ್​(ಹರಿಯಾಣ): ಈಗಿನ ವಿವಾಹ ಕಾರ್ಯಕ್ರಮಗಳು ಬಲು ದುಬಾರಿ. ಅಂಥದ್ದರಲ್ಲಿ ಹರಿಯಾಣದಲ್ಲಿ ಹೊಸ ಟ್ರೆಂಡ್​ ಶುರುವಾಗಿದೆ. ಮದುವೆ ಬಳಿಕ ವರ, ವಧುವನ್ನು ಹೆಲಿಕಾಪ್ಟರ್​​ನಲ್ಲಿ ಕರೆದೊಯ್ಯಬೇಕಿದೆ. ಈಗಾಗಲೇ ಮೂವರು ವರರು ತಮ್ಮ ಸಂಗಾತಿಯನ್ನು ಆಗಸದಲ್ಲಿ ತೇಲಾಡಿಸಿ ಕರೆದೊಯ್ದಿದ್ದಾರೆ. ಇದೀಗ ಮತ್ತೊಬ್ಬ ವರನೂ ತನ್ನ ಪತ್ನಿಯನ್ನು ಲೋಹದ ಹಕ್ಕಿಯಲ್ಲೇ ಕರೆದೊಯ್ದಿದ್ದಾನೆ.

ಹರಿಯಾಣದ ನುಹ್ ಜಿಲ್ಲೆಯಲ್ಲಿ ಕಳೆದ 50 ದಿನಗಳಲ್ಲಿ 4 ನವ ದಂಪತಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ. ನವವಿವಾಹಿತರು ವಿಮಾನದ ಮೂಲಕ ತಮ್ಮ ಮನೆ ತಲುಪಿದ್ದಾರೆ. ಇತ್ತೀಚೆಗೆ ನಡೆದ ವಿವಾಹ ಕಾರ್ಯಕ್ರಮದ ಬಳಿಕ ನವವಧು ಕರಿಷ್ಮಾ ಎಂಬಾಕೆಯನ್ನು ವರನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದಿದ್ದಾನೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!