Ad imageAd image

ಕನ್ನಡಿಗ ಕರುಣ ಭರ್ಜರಿ ಬ್ಯಾಟಿಂಗ್ ನಡುವೆಯೂ ದೆಹಲಿ ಕ್ಯಾಪಿಟಲ್ಸ್ ಗೆ ವೀರೋಚಿತ ಸೋಲು

Bharath Vaibhav
ಕನ್ನಡಿಗ ಕರುಣ ಭರ್ಜರಿ ಬ್ಯಾಟಿಂಗ್ ನಡುವೆಯೂ ದೆಹಲಿ ಕ್ಯಾಪಿಟಲ್ಸ್ ಗೆ ವೀರೋಚಿತ ಸೋಲು
WhatsApp Group Join Now
Telegram Group Join Now

ದೆಹಲಿ: ಕನ್ನಡಿಗ ಕರುಣ ನಯ್ಯರ ಆರ್ಭಟದ ಬ್ಯಾಟಿಂಗ್ ನಡುವೆಯೂ ದೆಹಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ 29 ನೇ ಲೀಗ್ ಪಂದ್ಯದಲ್ಲಿ 12 ರನ್ ಗಳಿಂದ  ವೀರೋಚಿತ ಸೋಲು ಕಂಡಿತು.

ಇಲ್ಲಿನ ಅರುಣ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 206 ರನ್ ಗಳಿಸಬೇಕಿದ್ದ ದೆಹಲಿ ಕ್ಯಾಪಿಟಲ್ಸ್ ತಂಡ 193 ರನ್ ಗಳಿಗೆ ಆಲೌಟಾಯಿತು. ಕರುಣ ನಯ್ಯರ ತಂಡವನ್ನು ಗೆಲ್ಲಿಸಲು ಮಾಡಿದ ಅತ್ಯುತ್ತಮ ಪ್ರಯತ್ನ ಕೈಗೂಡಲಿಲ್ಲ. ನಯ್ಯರ ಕೇವಲ 40 ಎಸೆತಗಳಲ್ಲಿ 12 ಬೌಂಡರಿ, 5 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದ್ದು, ವ್ಯರ್ಥವಾಯಿತು.

ಈ ಬಾರಿಯ ರಣಜಿ  ಋತುವಿನಲ್ಲಿ ಅತ್ಯುತ್ತಮ ಫಾರ್ಮ್ ಕಂಡುಕೊಂಡು  ಮೂರು ವರ್ಷಗಳ ನಂತರ ಐಪಿಎಲ್ ಕಣಕ್ಕೆ ಇಳಿದ ನಯ್ಯರ ಒಂದಿಷ್ಟು ಒತ್ತಡ ವಿಲ್ಲದೇ ಸಹಜವಾಗಿ ತಮ್ಮ ನೈಜ ಆಟವಾಡಿದರು. ಇವರು ಆಡುವ ಸಂದರ್ಭದಲ್ಲಿ ದೆಹಲಿ ಕ್ಯಾಪಿಟಲ್ಸ್ ಪಂದ್ಯವನ್ನು ಸುಲಭವಾಗಿ ಗೆದ್ದಿತು ಎಂದು ಅನಿಸಿತ್ತು. ಆದರೆ ಸತತ ವಿಕೆಟ್ ಕಳೆದುಕೊಂಡ ದೆಹಲಿ ಸೋಲು ಅನುಭವಿಸಬೇಕಾಯಿತು. ಇತ್ತ ಅಗತ್ಯವಾಗಿ ಬೇಕಿದ್ದ ಗೆಲುವಿನ ಮುಂಬೈ ಇಂಡಿಯನ್ಸ್ ಆಟಗಾರರು ಕುಣಿದು ಕುಪ್ಪಳಿಸಿದರು.

ಸ್ಕೋರ್ ವಿವರ

ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 205

ತಿಲಕ್ ವರ್ಮಾ 59 ( 33 ಎಸೆತ, 6 ಬೌಂಡರಿ, 3 ಸಿಕ್ಸರ್ ), ನಮನ್ ಧೀರ 38 ( 17 ಎಸೆತ, 3 ಬೌಂಡರಿ, 2 ಸಿಕ್ಸರ್)

ಕುಲದೀಪ್ ಯಾದವ್ 23 ಕ್ಕೆ 2)

ದೆಹಲಿ ಕ್ಯಾಪಿಟಲ್ಸ್ 193 ರನ್ ಗಳಿಗೆ ಸರ್ವ ವಿಕೆಟ್ ಪತನ

 ಕರುಣ್ ನಯ್ಯರ  89 ( 40 ಎಸೆತ, 12 ಬೌಂಡರಿ, 5 ಸಿಕ್ಸರ್) ಕರಣ ಶರ್ಮಾ 36 ಕ್ಕೆ 3

                                                                                                                                                    –ಪಂದ್ಯ ಶ್ರೇಷ್ಠ ಕರಣ್ ಶರ್ಮಾ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!