ಬಲಗೈ ದಾಂಡಿಗನ ಹಿಂದೆ ರೋಚಕ ಕಹಾನಿ
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ಆಟಗಾರ ಕರುಣ ನಯ್ಯರ ಈಗ ಮತ್ತೇ ಹವಾ ಎಬ್ಬಿಸಿದ್ದಾರೆ. ಕರುಣ ನಯ್ಯರ ಕಳೆದ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವುದರೊಂದಿಗೆ ಉನ್ನತ ಮಟ್ಟದ ಕ್ರಿಕೆಟ್ ಗೆ ಮತ್ತೇ ಗ್ರ್ಯಾಂಡ್ ಎಂಟ್ರಿ ಮಾಡಿದ್ದಾರೆ.
ಒಂದು ಅತ್ಯುತ್ತಮ ಇನ್ನಿಂಗ್ಸ್ ಗಾಗಿ ಕರುಣ ನಯ್ಯರ ಕುರಿತು ಇಷ್ಟೊಂದು ಹೊಗಳಿಕೆಯೇ ಅಂತಿರಾ? ಖಂಡತಾ ಇಲ್ಲ. ಕರುಣ್ ಹಿಂದೆ ರೋಚಕ ಕಹಾನಿಯೇ ಇದೆ. ಮಾಜಿ ಕರ್ನಾಟಕದ ಬ್ಯಾಟುಗಾರ ನಮ್ಮ ರಾಜ್ಯದ ಪರ ಹಲವಾರು ವರ್ಷ ರಣಜಿಯಲ್ಲಿ ಉತ್ತಮ ನಿರ್ವಹಣೆ ಮಾಡಿ, ತಂಡದ ನಾಯಕತ್ವವನ್ನು ವಹಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.

ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ತಂಡದ ಖಾಯಂ ಸ್ಥಾನ ಪಡೆಯಲು ವಿಫಲರಾದರು. ಒಂದು ಬಾರಿ ಟೆಸ್ಟ್ ಇನ್ನಿಂಗ್ಸ್ ವೊಂದರಲ್ಲಿ 333 ರನ್ ಗಳಿಸಿ ತ್ರಿ ಶತಕ ಸಾಧನೆ ಮಾಡಿದ್ದ ಕರುಣ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು. ಇದಾದ ಮೇಲೆ ಕರ್ನಾಟಕ ರಣಜಿ ತಂಡದಲ್ಲಿ ಸಾಕಷ್ಟು ಪೈಪೋಟಿ ನಡುವೆ ರಾಜ್ಯ ತಂಡದಲ್ಲಿಯೂ ಸ್ಥಾನ ಕಳೆದುಕೊಂಡರು.
ವಿದರ್ಭಾಗೆ ವಲಸೆ: ಕರ್ನಾಟಕ ತಂಡದಲ್ಲಿ ಖಾಯಂ ಸ್ಥಾನ ಸಿಗುವುದಿಲ್ಲ ಎಂದು ಮನವರಿಕೆ ಮಾಡಿಕೊಂಡ ಕರುಣ ನಯ್ಯರ ವಿದರ್ಭಾ ರಣಜಿ ತಂಡದ ಪರ ಆಡಲು ವಲಸೆ ಹೋದರು. ಸದ್ಯ ಅವರು ವಿದರ್ಭಾ ಪರವಾಗಿಯೇ ಡೊಮೆಸ್ಟಿಕ್ ಕ್ರಿಕೆಟ್ ಆಡುತ್ತಿದ್ದಾರೆ. ಈ ಬಾರಿ ರಣಜಿ ಋತುವಿನಲ್ಲಿ 7 ಶತಕ 4 ಶತಕಗಳೊಂದಿಗೆ ಭರ್ಜರಿ ಫಾರ್ಮ್ ಕಂಡುಕೊಂಡಿದ್ದರು. ವಿದರ್ಭಾ ತಂಡಕ್ಕೆ ನಾಯಕನಾಗಿ ಆಯ್ಕೆಯಾದ ಕರುಣ ನಯ್ಯರ ತಂಡವನ್ನು ಫೈನಲ್ ವರೆಗೆ ಕೊಂಡೊಯ್ಯದರು.

ಸಂಕಷ್ಟದ ಸ್ಥಿತಿ: ಭಾರತ ತಂಡದಿಂದ ಕೈ ಬಿಟ್ಟ ನಂತರ ಕರುಣ ನಯ್ಯರ ಓರ್ವ ಅತ್ಯಂತ ಪ್ರತಿಭಾವಂತ ಆಟಗಾರನಾಗಿ ಕಷ್ಟಪಟ್ಟಿದ್ದು, ಅಷ್ಟಿಷ್ಟಲ್ಲ. ಪ್ರತಿಭಾವಂತರಿಂದ ತುಂಬಿದ್ದ ಕರ್ನಾಟಕದ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಹೆಣಗಾಡಿದ ಸಂದರ್ಭದಲ್ಲಿ ಅವರು ಸಾಕಷ್ಟು ನೊಂದು ವಿದರ್ಭಾ ತಂಡ ಸೇರಿದ್ದರು. ಆ ತಂಡದಲ್ಲಿ ಆಡಿ ಅವರು ಅದ್ಭುತ ರೀತಿಯಲ್ಲಿ ಯಶಸ್ಸು ಸಾಧಿಸಿದರು. ಸದ್ಯ 39 ವರ್ಷ ವಯಸ್ಸಿನ ಕರುಣ ನಯ್ಯರ ಕ್ರಿಕೆಟ್ ಭವಿಷ್ಯ ಇನ್ನೆನೂ ಮುಗಿಯಿತು ಎಂದು ಕೊಂಡವರೇ ಹೆಚ್ಚು.
ಛಲ ಬಿಡದ ದಾಂಡಿಗ: ಕರುಣ್ ನಯ್ಯರ ಸಂದಿಗ್ದ ಸ್ಥಿತಿಯಲ್ಲೂ ಛಲ ಬಿಡದೇ ಕಠಿಣ ಪರಿಶ್ರಮ ವಹಿಸಿದರು. ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಈ ಬಾರಿ ಮೂರು ವರ್ಷಗಳ ನಂತರ ಮತ್ತೇ ಐಪಿಎಲ್ ಗೆ ಎಂಟ್ರಿ ಆಗಿದ್ದಾರೆ. ಅಷ್ಟೇ ಅಲ್ಲದೇ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ತೋರಿ ಮತ್ತೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಬೇಕು ಎಂಬ ಮಹೋನ್ನತ ಆಸೆಯೊಂದಿಗೆ ಐಪಿಎಲ್ ಆಡುತ್ತಿರುವ ಕರುಣ ನಯ್ಯರ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಉತ್ತಮ ಆರಂಭವನ್ನೇ ಕಂಡಿದ್ದಾರೆ.
ವಿದರ್ಭಾ ಪರ ಸತತ ಉತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ಆಯ್ಕೆಗಾರರ ಗಮನವನ್ನು ಮತ್ತೇ ತಮ್ಮತ್ತ ಸೆಳೆದಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಈ ಬಾರಿ ಐಪಿಎಲ್ ಗೆ ಅವಕಾಶ ನೀಡಲಾಗಿತ್ತು. ಆದರೆ ನಿನ್ನೆವರೆಗೆ ಅವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಕಳೆದ ರಾತ್ರಿ ದೆಹಲಿ ಕ್ಯಾಪಿಟಲ್ಸ್ ಮ್ಯಾನೆಂಜಮೆಂಟ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿತು. ಈ ಅವಕಾಶವನ್ನು ಎರಡು ಕೈಗಳಿಂದ ಸದ್ಬಳಕೆ ಮಾಡಿಕೊಂಡ ಕರುಣ್ ಮತ್ತೇ ಹವಾ ಎಬ್ಬಿಸಿದ್ದಾರೆ. ಕರುಣ್ ನಯ್ಯರ ಮುಂಬರುವ ಎಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಮತ್ತೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲಿ ಎಂಬುದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹಾರೈಕೆ.




