Ad imageAd image

ಯಳಂದೂರು ತಾಲ್ಲೂಕು ಪ್ರೆಸ್ ಕ್ಲಬ್ ಕೌನ್ಸಿಲ್ ಕಚೇರಿಯಲ್ಲಿ ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಣೆ

Bharath Vaibhav
ಯಳಂದೂರು ತಾಲ್ಲೂಕು ಪ್ರೆಸ್ ಕ್ಲಬ್ ಕೌನ್ಸಿಲ್ ಕಚೇರಿಯಲ್ಲಿ ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಣೆ
WhatsApp Group Join Now
Telegram Group Join Now

ಯಳಂದೂರು: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೋಕು ಪ್ರೆಸ್ ಕ್ಲಬ್ ಕೌನ್ಸಿಲ್ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 134ನೇ ಯ ಜನ್ಮ ದಿನಾಚರಣೆಯನ್ನು ಸರಳವಾಗಿ ಸಿಹಿ ಹಂಚುವುದರ ಮೂಲಕ ಆಚರಿಸಲಾಯಿತು.
ಚಾಮರಾಜನಗರ ದ ಸಂ ಸ ಜಿಲ್ಲಾ ಸಂಚಾಲಕರಾದ ಸಿ ರಾಜಣ್ಣ ಯರಿಯೂರು ರವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಉಮಾಶಂಕರ ರವರು ಡಾ ಬಿ ಆರ್ ಅಂಬೇಡ್ಕರ್ ರವರ ಇಡೀ ದೇಶದಲ್ಲೇ ಎಲ್ಲರಿಗೂ ಸಮಾನ ಹಕ್ಕು ನೀಡಿರುವ ವ್ಯಕ್ತಿ ಉದಾಹರಣೆ ಗೆ ಸಾಮನ್ಯ ಪ್ರಜೆಯಿಂದ ರಾಷ್ಟ್ರಪತಿಗಳವರೆಗೂ ಒಂದೇ ಮತದಾನ ಮಾಡುವಹಕ್ಕನ್ನು ನೀಡಿದ್ದಾರೆ ಅವರ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು.

ಡಿ ಎಸ್ ಎಸ್ ರಾಜಣ್ಣ ರವರು ಮಾತನಾಡಿ ದಿನದಲಿತರಿಗೆ ಹಿಂದುಳಿದ ಜನಾಂಗದ ಹೇಳಿಗೆಗೆ ಶ್ರಮಿಸಿದ ವ್ಯಕ್ತಿ ಅಂಬೇಡ್ಕರ್ ರವರು ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೋಕು ಘಟಕದಿಂದ ಸರಳವಾಗಿ, ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ, ಘಟಕದ ಅಧ್ಯಕ್ಷರು ಇದೇ ತರಹ ಇನ್ನು ಹೆಚ್ಚಿನ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಆಶಿಸುತ್ತೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಭಾರತ ವೈಭವ ದಿನ ಪತ್ರಿಕೆ ವರದಿಗಾರರದ ಸ್ವಾಮಿ ಬಳೇಪೇಟೆ,ನಂಜುಂಡಸ್ವಾಮಿ ವೈ ಕೆ ಮೋಳೆ, ಜನಾರ್ದನ್ ಇರಸವಾಡಿ, ಡಾ. ದೊಡ್ಡರಾಜು,ವರದರಾಜು, ಬಳೆಪೇಟೆ. ಬಿ ಎಸ್ ಎನ್ ಎಲ್ ನ ರವಿಕುಮಾರ್, ಹಾಗೂ ಅನಿಲ್ ಗೂಳಿಪುರ, ಉಪಸ್ಥಿತರಿದ್ದರು.

ವರದಿ:  ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!