ರಾಯಬಾಗ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೂದಿಹಾಳಗ್ರಾಮದಲ್ಲಿ ಶ್ರೀ ಹನುಮ ಜಯಂತಿಯ ಪ್ರಯುಕ್ತ ಶ್ರೀ ಹನುಮಾನ ಯುವಕ ಮಂಡಳ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಪುರುಷರ ಕಬಡ್ಡಿಪಂದ್ಯಾವಳಿಗೆ ಮಾನ್ಯ ಚಿಕ್ಕೋಡಿ ಲೋಕಸಭಾ ಸಂಸದರಾದ ಕು. ಪ್ರಿಯಾಂಕ ಅಕ್ಕಾ ಸತೀಶ ಜಾರಕಿಹೊಳಿ ಅವರು ಉದ್ಘಾಟನೆ ಮಾಡುವ ಮೂಲಕ ಗ್ರಾಮೀಣ ಕ್ರೀಡೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ ಮಹಾವೀರ ಮೋಹಿತೆ ಸಚಿವರ ಆಪ್ತ ಸಹಾಯಕರಾದ ಶ್ರೀ ಶಿವನಗೌಡ ಪಾಟೀಲ ಶ್ರೀಮತಿ ನಿರ್ಮಲಾ ಪಾಟೀಲ ದಿಲೀಪ ಜಮಾದಾರ ಅರ್ಜುನ ಬಂಡಗರ ಸಾಗರ ಬಿಳಗಿ ಅಜಿತ ಜಗದಾಳ ಕೆಂಪಣ್ಣ ಆಡಿ ಈರಪ್ಪ ನಾಯಿಕ ಮಾರುತಿ ಘಂಟಿ ರಾಜು ಕುಲಗುಡ ದರೆಪ್ಪ ಬಿರನಾಳ ಹಾಗೂ ಬೂದಿಹಾಳ ದ ಸಮಸ್ತ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




