ಬೆಂಗಳೂರು: ಈಗಿನ ಯುವಕರಿಗೆ ವಿದ್ಯಾರ್ಥಿಗಳಿಗೆ ದೇಶಿ ಕ್ರೀಡೆಗಳು ಮೈಗೂಡಿಸಿಕೊಳ್ಳಬೇಕು ಹರೀಶ್ ಗೌಡ್ರು
ನಾವು ನಮ್ಮ ದೇಶ .ನಾಡು. ಭಾಷೆ .ನೆಲ. ಜಲ ಇವುಗಳನ್ನು ತಲತಲಾಂತರದಿಂದ ಹೇಗೆ ಕಾಪಾಡಿಕೊಂಡು ಬರುತ್ತಿದ್ದೇವೆ ಹಾಗೆಯೇ ನಾವೆಲ್ಲರೂ ಗ್ರಾಮೀಣ ಸೊಗಡಿನ ಆಟೋಟಗಳು ಮತ್ತು ದೇಶಿ ಕ್ರೀಡೆಗಳನ್ನು ಈಗಿನ ಯುವ ಪೀಳಿಗೆಗಳು ಮೈಗೂಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಬಿಬಿಎಂಪಿ ಆಕಾಂಕ್ಷಿ ಅಭ್ಯರ್ಥಿ ಹರೀಶ್ ಗೌಡ್ರು ಹೇಳಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ದೊಡ್ಡಣ್ಣ ಕೈಗಾರಿಕಾ ಪ್ರದೇಶದಲ್ಲಿರುವ ಕಿರಣ್ ಆಟದ ಮೈದಾನದಲ್ಲಿ ಫ್ಯೂಚರ್ ಸ್ಟಾರ್ ಕಬ್ಬಡ್ಡಿ ಕ್ಲಬ್ ವತಿಯಿಂದ ಫ್ರೆಂಡ್ಸ್ ಕಪ್. ಸೀಸನ್.2. ರಾಜ್ಯಮಟ್ಟದ ಕೆ ಜಿ ವಿಭಾಗದ ಮ್ಯಾಟ್ ಕಬ್ಬಡ್ಡಿ ಪಂದ್ಯಾಗಳು ಆಯೋಜಿಸಿದ್ದ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಗಾದೆಯಂತೆ ಈಗಿನ ವಿದ್ಯಾರ್ಥಿಗಳು ಮತ್ತು ಯುವಕರು ಮುಂದಿನ ಗುರಿ ಮನದಲ್ಲಿಟ್ಟುಕೊಂಡು ಗ್ರಾಮೀಣ ಸೊಗಡಿನ ಆಟೋಟಗಳು ದೇಶ ಕ್ರೀಡೆಗಳು ಇವೆಲ್ಲವನ್ನೂ ಮೈಗೂಡಿಸಿಕೊಂಡಾಗ ಮಾತ್ರ ತಮ್ಮ ಬದುಕು ಉಜ್ವಲ ಆಗುತ್ತದೆ ಎಂದು ಹರೀಶ್ ಗೌಡ್ರು ಅಭಿಪ್ರಾಯಪಟ್ಟರು.

ಕಬಡ್ಡಿ ಆಯೋಜಕ ಲೋಕೇಶ್ ಅವರು ಮತ್ತು ಪದಾಧಿಕಾರಿಗಳು ಸೇರಿ ಹರೀಶ್ ಗೌಡರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತ್, ನಂದೀಶ್, ಐಸ್ ರವಿ, ಕಾಂಗ್ರೆಸ್ ಮುಖಂಡ ಮೈಕಲ್ ಬಾಬು,ಮಹಾದೇವ, ಗಿರಿಜಾ, ಹೇಮಾ ರಾಜೇಂದ್ರ ಸೇರಿದಂತೆ ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




