“ಆಲಮಟ್ಟಿ ಜಲಾಶಯ ಭದ್ರತಾ ಘಟಕದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯನ್ನು
ಸಂವಿಧಾನದ ಪ್ರಸ್ತಾವನೆ ಇರುವ ಫಲಕವನ್ನು ಅನಾವರಣಗೊಳಿಸಿದರು.“
ನಿಡಗುಂದಿ:ಸಂವಿದಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಜಲಾಶಯ ಭದ್ರತಾ ಘಟಕದಲ್ಲಿ ಬಹಳ ಅರ್ಥ ಪೂರ್ಣಿವಾಗಿ ಆಚರಿಸಲಾಯಿತು. ಮೊದಲಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ವಿವಿಧ ಹೂ ಗಳಿಂದ ಅಲಂಕಾರ ಗೊಳಿಸಿ ಪೂಜೆ ಸಲ್ಲಿಸಿದರು.

ನಂತರ ಸಂವಿಧಾನದ ಪ್ರಸ್ತಾವನೆ ಇರುವ ಫಲಕವನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಹಿರಿಯರು ಅಧಿಕಾರಿಗಳು ಸಂವಿದಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರುಣ್ ಡಿ. ವಿ ಸಹಾಯಕ ಕಮಾಂಡೆಂಟ್, ಘಟಕದ ಉಸ್ತುವಾರಿ ಅಧಿಕಾರಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ ಪೊಲೀಸ್ ಇನ್ಸ್ಪೆಕ್ಟರ್, ಪ್ರಶಾಂತ್ ಸಜ್ಜನ ಪಿಎಸ್ಐ ಹಾಗೂ ಘಟಕದ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.
ವರದಿ :ಅಲಿ ಮಕಾನದಾರ




