Ad imageAd image

ಪಂಚಭೂತಗಳಲ್ಲಿ ಲೀನವಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್​​​

Bharath Vaibhav
ಪಂಚಭೂತಗಳಲ್ಲಿ ಲೀನವಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್​​​
WhatsApp Group Join Now
Telegram Group Join Now

ಬೆಂಗಳೂರು : ನಿವೃತ್ತ ಡಿಜಿಪಿ ಓಂ ಪ್ರಕಾಶ್​​​ ಅವರು ನಿನ್ನೆಯಷ್ಟೇ (ಏ.20) ಅವರ ಪತ್ನಿ ಪಲ್ಲವಿ ಮತ್ತು ಪುತ್ರಿಯಿಂದ ಕಗ್ಗೊಲೆಯಾಗಿದ್ದು, ಇಂದು ವಿಲ್ಸ್​​ನ ಗಾರ್ಡನ್​​​ನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು.

ಓಂ ಪಕ್ರಾಶ್ ಅವರ ಪುತ್ರ ಕಾರ್ತಿಕೇಶ್ ಅವರು ಚಿತೆಗೆ ಅಗ್ನಿಸ್ಪರ್ಶ ನೀಡುವ ಮೂಲಕ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಪೊಲೀಸ್ ಗೌರವದೊಂದಿಗೂ ಅಂತ್ಯಕ್ರಿಯೆ ನೆರವೇರಿದ್ದು, ಈ ಸಂದರ್ಭದಲ್ಲಿ ಹಲವು ಗಣ್ಯರು, ಸಂಬಂಧಿಕರು ಭಾಗಿಯಾಗಿದ್ದರು.

ಹೆಚ್​​​​​​ಎಸ್​​ಆರ್​ ಲೇಔಟ್​​​ನ ಮನೆಯಲ್ಲಿ ಓಂಪ್ರಕಾಶ್ ಅವರ ಪತ್ನಿ ಮತ್ತು ಪುತ್ರಿ ಸೇರಿ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ 10ಕ್ಕೂ ಹೆಚ್ಚು ಬಾರಿ ಚುಚ್ಚಿ ಹತ್ಯೆ ಮಾಡಿದ್ದರು. ಮೇಲ್ನೋಟಕ್ಕೆ ಆಸ್ತಿ ವಿಚಾರವಾಗಿ ಈ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪುತ್ರ ನೀಡಿದ ದೂರಿನಡಿ ಓಂಪ್ರಕಾಶ್ ಅವರ ಪತ್ನಿ ಮತ್ತು ಪುತ್ರಿಯನ್ನು ಪೊಲೀಸರು ವಶಕ್ಕೆ ಪಡೆದು ಸದ್ಯ ವಿಚಾರಣೆ ಚುರುಕುಗೊಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!