ಯಳಂದೂರು: ಬಿಜೆಪಿ ತಾಲ್ಲೂಕು ಮಂಡಲದಿಂದ ಕಾಶ್ಮೀರದ ಪಹಾಲ್ಗಮ್ ನಲ್ಲಿ ನೆಡೆದ ಭಯೋತ್ಪಾದಕರ ಅಟ್ಟಹಾಸಕೆ ಹುತಾತ್ಮರಾದ ಭಾರತೀಯರ ಪ್ರವಾಸಿಗರ ಆತ್ಮಕ್ಕೆ ಶಾಂತಿಯನ್ನು ಕೋರಿ ಯಳಂದೂರು ಬಿ ಜೆ ಪಿ ಮಂಡಲದ ವತಿಯಿಂದ ಬುಧುವಾರ ರಾತ್ರಿ ಪಟ್ಟಣದ ವಾಲ್ಮೀಕಿ ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೌನ ಮೆರವಣಿಗೆ ಮಾಡಲಾಯಿತು.
ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರು ರವರು ಮಾತನಾಡಿ ಹುತಾತ್ಮರ ಆತ್ಮಕೆ ಶಾಂತಿಯನ್ನು ಆ ದೇವರು ನೀಡಲಿ, ಈ ಘಟನೆ ಎಲ್ಲಾ ಭಾರತೀಯರಿಗೆ ತುಂಬಾ ದುಃಖ್ಖವನ್ನು ತಂದಿದೆ ಹೋಗಿ ನಿಮ್ಮ ಪ್ರಧಾನ ಮಂತ್ರಿಗೆ ಹೇಳಿ ನಿಮ್ಮಲಿ ಇಬ್ಬರನ್ನು ಬಿಡುತೇನೆ ಎಂದಿರುವುದು ಈ ಭಯೋತ್ಪಾದಕಕರಿಗೆ ತಕ್ಕ ಉತ್ತರ ನೀಡಬೇಕು ಎಂದು ತಿಳಿಸಿದರು.

ಮೌನ ಮೆರವಣಿಗೆಯಲ್ಲಿ ತಾಲೋಕು ಬಿ ಜೆ ಪಿ ಮೋರ್ಚಾ ಅಧ್ಯಕ್ಷರಾದ ಅನಿಲ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಹೇಶ್, ಜಿಲ್ಲಾ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮಣ್ಣ,ಚಂದ್ರ, ಸೂರಿ, ಭೀಮಪ್ಪ, ಹಾಗೂ ತಾಲ್ಲೋಕು ಬಿಜೆಪಿ ಮುಖಂಡರು ಭಾಗವಹಿಸಿದರು.
ವರದಿ: ಸ್ವಾಮಿ ಬಳೇಪೇಟೆ




