ಸದಲಗಾ:ವಿದ್ಯಾಸಾಗರ ಮುನಿಗಳ ಸ್ಮಾರಕ ದರ್ಶನ. 19 ರಾಜ್ಯಗಳಲ್ಲಿಯ 42 ಶಕ್ತಿಪೀಠಗಳ ದರ್ಶನದ ಸಂಕಲ್ಪ. ಮನದಲ್ಲಿ ಛಲ ಆತ್ಮವಿಶ್ವಾಸವಿದ್ದರೆ ದೇಶದಲ್ಲಿಯ 52 ಶಕ್ತಿ ಪೀಠಗಳ ದರ್ಶನ ಪಡೆಯಲು ಸಾಧ್ಯ ಎಂಬುದನ್ನು ನಿದರ್ಶಿಸಲು 71 ವರ್ಷದ ಪರಮಪೂಜ್ಯ ನರ್ಮದಾನಂದ ಬ್ರಹ್ಮಚಾರಿ ಮಹಾರಾಜರು ಸಂಕಲ್ಪ ಹೊತ್ತು ಈಗಾಗಲೇ 17800 ಕಿಲೋ ಮೀಟರ್ ಪಾದಯಾತ್ರೆ ನಡೆಸಿ 39 ಶಕ್ತಿಪೀಠಗಳ ದರ್ಶನ ಪಡೆದು ಹಿಂದೂ ಜನಜಾಗೃತಿ ಸಂಕಲ್ಪ ಪೂರ್ಣಗೊಳಿಸಿರುವುದಾಗಿ ಮಹಾರಾಜರು BV 5 ನ್ಯೂಸ್ ಪ್ರತಿನಿಧಿಗೆ ತಿಳಿಸಿದರು.
ಮೂಲತಃ ಕಲ್ಕತ್ತಾ ಪಟ್ಟಣದವರಾದ ಮಹಾರಾಜರು ನವೆಂಬರ್ 20 -2021ರಂದು ನರ್ಮದಾ ನದಿಯ ಉಗಮ ಸ್ಥಾನ ಅಮರಕಂಟಕದಿಂದ ಪಾದಯಾತ್ರೆ ಪ್ರಾರಂಭಿಸಿದ್ದು ಬುಧವಾರ ಇಂದು ಬರೋಬ್ಬರಿ ಮೂರು ವರ್ಷ ಐದು ತಿಂಗಳು ಪೂರ್ಣಗೊಂಡಿದ್ದು ತೆಲಂಗಾಣದ ಜೋಗುಲಾಂಬೆ ಶಕ್ತಿಪೀಠದ ದರ್ಶನ ಪಡೆದು ಅಲ್ಲಿಂದ 450 ಕಿಲೋಮೀಟರ್ ಅಂತರ ಕ್ರಮಿಸಿ ಕರ್ನಾಟಕದ ರಾಯಚೂರು ಬಾಗಲಕೋಟೆ ಬೆಳಗಾವಿ ಮಾರ್ಗದಿಂದ ಪ್ರಸ್ತುತ ಸದಲಗಾ ಪಟ್ಟಣಕ್ಕೆ ಆಚಾರ್ಯ 108 ಪರಮಪೂಜ್ಯ ವಿದ್ಯಾಸಾಗರಮುನಿಗಳ ಪ್ರತಿಮೆ ದರ್ಶನಕ್ಕಾಗಿ ಆಗಮಿಸಿರುವುದಾಗಿ ತಿಳಿಸಿದರು.
ಅಮರಕಂಠಕದಿಂದ ಪಾದಯಾತ್ರೆ ಪ್ರಾರಂಭಿಸಿದ್ದು ಈಗಾಗಲೇ ಮಧ್ಯಪ್ರದೇಶ, ರಾಜಸ್ತಾನ್ ಚಿತ್ರಕೂಟ ಹರಿಯಾಣ ಪಂಜಾಬ್ ಜಮ್ಮು ಕಾಶ್ಮೀರ್ ಹಿಮಾಚಲ್ ಪ್ರದೇಶ್ ಉತ್ತರ ಪ್ರದೇಶ್ ಬಿಹಾರ್ ಆಸಾಮ ಮೇಘಾಲಯ ತ್ರಿಪುರಾ ಉತ್ತರ ಬಂಗಾಲ ಜಾರ್ಖಂಡ್ ಪಶ್ಚಿಮ ಬಂಗಾಲ ಒರಿಸ್ಸಾ ತಮಿಳುನಾಡು, ಕನ್ಯಾಕುಮಾರಿ ರಾಜ್ಯದಿಂದ ಕರ್ನಾಟಕ ಪ್ರವೇಶಿಸಿದ್ದು ನಾಳೆ ದಿನಾಂಕ 25 ಏಪ್ರಿಲ್ 2025 ರಂದು ಮಹಾರಾಷ್ಟ್ರದ ಕೊಲ್ಲಾಪುರ ಮಹಾಲಕ್ಷ್ಮಿದರ್ಶನ ಪಡೆದು ಜಿಲ್ಲೆಯಲ್ಲಿ ಏಳು ದೇವಾಲಯಗಳ ದರ್ಶನದೊಂದಿಗೆ ಗುಜರಾತ್ ರಾಜ್ಯಕ್ಕೆ ಪ್ರವೇಶ ಪಡೆಯುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅತಿಕ್ರಾಂತ ಪಾಟೀಲ್ ಅಕ್ಷಯಪಾಟೀಲ್ ಶಾಂತಿನಾಥ ಉಗಾರೆ, ವಿಪುಲ ದೇಸಾಯಿ ವೇದಾಂತ ನಾಯಕ ಸೇರಿದಂತೆ ಸ್ವಯಂಸೇವಕರು ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ




