ಸಿಂಧನೂರು : ಏ. 23 ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಎನ್. ಮೂರ್ತಿ ಸ್ಥಾಪಿತ ತಾಲೂಕ ಸಮಿತಿ ಸಿಂಧನೂರು ವತಿಯಿಂದ ತಹಸಿಲ್ದಾರ್ ಕಾರ್ಯಾಲಯದ ಮುಂದೆ ಭೂ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಧರಣಿ ಸತ್ಯಾಗ್ರಹವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ ಹಾಗೂ ವಿಭಾಗೀಯ ಅಧ್ಯಕ್ಷ ಬಸವರಾಜ ಸಾಸಲಮರಿ ಮಾತನಾಡಿ ಸಿಂಧನೂರು ತಾಲೂಕಿನ ಅನೇಕ ಗ್ರಾಮಗಳಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯಗಳ ಬಡ ಭೂ ಹೀನರಿಗೆ ಹೆಚ್ಚುವರಿ ಭೂಮಿ ಕರ್ನಾಟಕ ಸರ್ಕಾರವು ಭೂ ಹಂಚಿಕೆ ಮಾಡಿ ಆದೇಶ ಮಾಡಿದೆ ಆದೇಶವಾಗಿ ಸುಮಾರು ವರ್ಷಗಳು ಕಳೆದರೂ ಬಡವರಿಗೆ ಭೂಮಿ ಉಳಿಮೆಗೆ ಅವಕಾಶ ನೀಡದೆ ಭೂ ಮಾಲೀಕರು ಅವರ ಮೇಲೆ ಮಾರಣಾಂತಿಕ ಹಲ್ಲಿ ಮಾಡುತ್ತಿದ್ದಾರೆ.
ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸ್ ಅಧಿಕಾರಿಗಳು ಇದು ಸಿವಿಲ್ ಮ್ಯಾಟರ್ ನೀವು ನ್ಯಾಯಾಲಯಕ್ಕೆ ಹೋಗಿರಿ ಎಂದು ಸಮುಜಾಯಿಸಿ ಉತ್ತರ ನೀಡಿ ಕಳಿಸುತ್ತಾರೆ ಸ್ಥಳೀಯ ಶಾಸಕ ಹಂಪನ ಗೌಡ್ರು ಕೂಡ ಭೂ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಕಾನೂನು ಬದ್ಧವಾಗಿ ಬಡವರಿಗೆ ಮಂಜುರಾದ ಜಮೀನಿನ ಪಟ್ಟ ಕೊಡದೆ ಕಂದಾಯ ಅಧಿಕಾರಿಗಳು ಮತ್ತು ಉಪ ನೋಂದಣಿ ಅಧಿಕಾರಿಗಳು ಬಡವರಿಗೆ ಹಂಚಿಕೆಯಾದ ಭೂಮಿಗಳನ್ನು ಆಕ್ರಮವಾಗಿ ಮಾರಾಟ ಮಾಡಿ ಬಡವರಿಗೆ ಮೋಸ ವಂಚನೆ ಮಾಡುತ್ತಿದ್ದಾರೆ ತಾವುಗಳು ಈ ಮೇಲಿನ ಎಲ್ಲ ವಿಷಯಗಳ ಬಗ್ಗೆ ಕೂಲಂಗಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ವಿಳಂಬ ಧೋರಣೆ ತೋರಿದರೆ 13-05-2025 ರಂದು ಮಾನ್ಯಸಹಾಯಕ ಆಯುಕ್ತರು ಲಿಂಗಸುಗೂರು ಕಾರ್ಯಾಲಯ ಮುಂದೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಮಾನ್ಯ ತಹಸಿಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದರು.
ಸಂದರ್ಭದಲ್ಲಿ, ಬಸವರಾಜ ಸಾಸಲ್ಮಾರಿ ವಿಭಾಗಿಯ ಅಧ್ಯಕ್ಷರು, ಅಶೋಕ ನಂಜಲ ದಿನ್ನಿ ಜಿಲ್ಲಾಧ್ಯಕ್ಷರು, ನಿರುಪಾದೆಪ್ಪ ಎಲೆಕೂಡಲಗಿ ತಾಲೂಕ ಅಧ್ಯಕ್ಷರು, ಮರಿಸ್ವಾಮಿ ಹಸಮಕಲ್. ಬಸವರಾಜ ಹತ್ತಿಗುಡ್ಡ ಹೋಬಳಿ ಅಧ್ಯಕ್ಷರು, ಆಲಂಬಷ ದಡೆಸೂಗೂರು, ದುರ್ಗಪ್ಪ ಕುರುಕುಂದಿ, ಈರಪ್ಪ ವಿರುಪಾಪುರ, ದೇವಪ್ಪ ಮಲ್ಲದಗುಡ್ಡ. ಸಣ್ಣಪ್ಪ ಈರಪ್ಪ. ಮಾರೆಪ್ಪ ಮಳ್ಳಿ. ರಾಜಸಾಬ್. ಬಾಬುಸಾಬ್. ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




