ಅಥಣಿ :ತಾಲೂಕಿನ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗುಂಡೇವಾಡಿ ಗ್ರಾಮದಲ್ಲಿ
ಬುಧವಾರ ದಿ. 23-04-2025 ರಂದು ಶಾಲೆಯ ಸನ್ 2005-06 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಎಲ್ಲಾ ಶಿಕ್ಷಕ ಬೃಂದವು ಗುರುಮಾತೆಯರು ಸೇರಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ನಂತರ ಸತ್ಕಾರ ಮೂರ್ತಿಗಳು ಹಿಂದಿನ ಶಿಕ್ಷಕಿ ಶ್ರೀಮತಿ ಸಿ ವಿ ಹಿರೇಮಠ ಅವರು ಮಾತನಾಡಿ 20 ವರ್ಷದ ಹಿಂದೆ ನಾನು ಕಲಿಸುವಂತಹ ಮಕ್ಕಳು ಇವತ್ತಿಗೆ ಅನೇಕ ವಿದ್ಯಾರ್ಥಿಗಳು ಎತ್ತರ ಮಟ್ಟಿಗೆ ಬೆಳೆದಿರುವುದು ನನಗೆ ತುಂಬಾ ಸಂತೋಷವಾಗಿದೆ ಗುರು ಶಿಷ್ಯರು ಮತ್ತೆ ನಾವು ಕೂಡಿರುವುದು ನನಗೆ ತುಂಬಾ ಸಂತೋಷ ತಂದಿದೆ ಮತ್ತೆ ನಮ್ಮ ನಿಮ್ಮ ಭೇಟಿಯಾಗುವ ಖುಷಿ ಇನ್ನುೊಂದಿಲ್ಲ ಇವತ್ತು ನೀವು ನಾವು ಒಟ್ಟಿಗೆ ಸೇರಿ ಗುರು ಶಿಷ್ಯರ ಮಿಲನದ ಹಬ್ಬವನ್ನು ಆಚರಣೆ ಮಾಡುತ್ತಿರುವುದು ನನಗೆ ಇನ್ನಷ್ಟು ಖುಷಿ ತಂದಿದೆ ಗುರು ಶಿಷ್ಯರ ಸಂಬಂಧ ಗಟ್ಟಿಯಿದೆ ಎಂದು ತೋರಿಸಿಕೊಟ್ಟಿದ್ದೀರಿ ನಾವು ನೀವು ಭೇಟಿಯಾಗುವ ಸೌಭಾಗ್ಯ ಕೂಡಿದ್ದು ಇದರಷ್ಟು ಖುಷಿ ಎಲ್ಲಿದೆ ಎಂದರು.
ನಮ್ಮಿಂದ ಕಲಿತ ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರು ತಂದೆ ತಾಯಿ ಗುರು ಹಿರಿಯರನ್ನು ನಾವು ಎಂದಿಗೆ ಮರೆಯಬಾರದು ತಾವು ಯಾವುದೇ ಹುದ್ದೆಯಲ್ಲಿ ಇದ್ದರೂ ತಮ್ಮ ಪ್ರಾಮಾಣಿಕ್ಯತೆ ಎಂದಿಗೂ ಮರೆಯಬಾರದೆಂದು ಕಿವಿ ಮಾತು ಹೇಳಿದರು.
ಶ್ರೀಮತಿ ಎಸ್ ಬಿ ಮಹಡಿಕರ ಮಾತನಾಡಿದ ಅವರು ನಾನು ಗುಂಡೇವಾಡಿ ಗ್ರಾಮದಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಈಗ ಇಲ್ಲೇ ಬರುವ ಮೇ 31ಕ್ಕೆ ನಿವೃತ್ತಿ ಆಗುವ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಮಿಲನ ಇನ್ನಷ್ಟು ಆತ್ಮವಿಶ್ವಾಸ ನನ್ನ ನಿವೃತ್ತಿ ಜೀವನಕ್ಕೆ ಇನ್ನಷ್ಟು ಖುಷಿ ತಂದಿದೆ ಎಂದರು ಗುರು ಶಿಷ್ಯರ ಸಂಬಂಧ ಹೀಗೆ ಗಟ್ಟಿಯಾಗಿ ಉಳಿಯಲಿ ಎಂದರು. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಶ್ರೀ ಗುರುವೇ ನಮಃ ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವ ಮತ್ತು ಜ್ಞಾನೋದಯದ ಬೆಳಕು ನೀಡಿದ ಗುರು ಅವನೇ ನಿಜವಾದ ಶಿಕ್ಷಕ ಎಂದರು ಗುರು ಶಿಷ್ಯರ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಉಳಿಯುವಂತೆ ತಾವೆಲ್ಲರೂ ಮಾಡಿದಿರಿ ಗುರು ಶಿಷ್ಯರ ಸಂಬಂಧ ಹೀಗೆ ಇರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಆರ್ ಜಿ ಹಳಮನಿ. ಎಸ್ ಕೆ ಕಾತ್ರಾಳ. ಶ್ರೀಮತಿ ಎಲ್. ಎಮ. ವೇಣಿ. ಬಿ.ಎ ಬರಡಗಿ ದೀಪಾ ಹಾಗೂ ಹಳೆ ವಿದ್ಯಾರ್ಥಿಗಳಾದ ಶ್ರೀಕಾಂತ ಸಿ ದೊಡಮನಿ. ಪರಗೊಂಡ ಭಿ ಲಖಮಗೌಡರ.ಸಂತೋಷ ಶ್ರೀ ದಾನೊಳ್ಳಿ .ಸಂತೋಷ ಲೋಹಾರ ಜೀಜಾಬಾಯಿ ಅ ಸಾಳುಂಕೆ. ದೀಪಾ ಪ್ರಭಾಕರ .ಪ್ರಿಯಾಂಕ ಆಲಬಾಳ ಉಷಾ ಕಾಂಬಳೆ. ಮುತ್ತಪ್ಪ ಪಾಟೀಲ.ಸುರೇಶ ಕೊಣ್ಣೂರ. ಬಾಬು ಕಾಂಬಳೆ. ಕುಮಾರ ಕಾಂಬಳೆ.ನಿಂಗಪ್ಪ ಅವತಾಡೆ. ಮುತ್ತಪ್ಪ ಪಾಟೀಲ್.ಮತ್ತು ಚಿನ್ನವ ಗುಂಜಗಾವಿ. ಜನಭಾಯಿ ಸೂರ್ಯವಂಶಿ. ಅಕ್ಕತಾಯಿ ಜಾದವ. ಇನ್ನಿತರ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಪ್ರಿಯಾಂಕ ಅಲಬಾಳ ಸ್ವಾಗತಿಸಿದರು. ಉಷಾ ಕಾಂಬಳೆ ನಿರೂಪಿಸಿದರು. ಜೀಜಾಬಾಯಿ ಸಾವಳಂಕೆ ವಂದಿಸಿದರು.
ವರದಿ : ರಾಜು ವಾಘಮಾರೆ




