ಗುರುಮಾಠಕಲ್ : ಪಹಲ್ಗಾಮ್ ನಲ್ಲಿ ನಡೆದಿರುವ ಕ್ರೂರ ಉಗ್ರ ದಾಳಿ ದೇಶದ ಶಾಂತಿ ಮತ್ತು ಏಕತೆಗೆ ಅಡ್ಡಿಯುಂಟುಮಾಡುವ ಅಮಾನುಷ ಕೃತ್ಯವಾಗಿದೆ. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ದೇಶಭಕ್ತ ನಾಗರಿಕರ ಅಗಲಿಕೆಯ ನೋವು ದೇಶದ ಜನತೆಯನ್ನು ವಿಷಾದದಲ್ಲಿ ಮುಳುಗಿಸಿದೆ.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತದೆ. ಇಂತಹ ಗೊಂದಲ ಹಾಗೂ ಹಿಂಸಾತ್ಮಕ ಘಟನೆಗಳಿಗೆ ಯಾವುದೇ ರೀತಿಯ ಕ್ಷಮೆ ನೀಡಲಾಗದು ಎಂದು ಕೆ.ಬಿ. ವಾಸು, ಎಐಬಿಎಸ್ಪಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಕೂಡಲೇ ಈ ಘಟನೆಯಲ್ಲಿ ಭಾಗಿಯಾದ ಉಗ್ರರು ಹಾಗೂ ಅವುಗಳ ಬೆಂಬಲಿಗರ ವಿರುದ್ಧ ಕಠಿಣ ಗಂಭೀರ ಕಾನೂನು ಕ್ರಮ ಜರುಗಿಸಬೇಕು. ಅವರನ್ನು ಶೀಘ್ರ ಪತ್ತೆಹಚ್ಚಿ ಕಾನೂನು ವಿಧಿಯಾದ ಶಿಕ್ಷೆ ನೀಡಬೇಕು.
ಇದೇ ಸಂದರ್ಭದಲ್ಲಿ, ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ದುಃಖಿತ ಕುಟುಂಬಗಳಿಗೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಮತ್ತು ಅಗತ್ಯ ಪುನರ್ವಸತಿ ಸೇವೆಗಳನ್ನು ಒದಗಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯಿಸುತ್ತದೆ ಹಾಗೂ ದೇಶದಲ್ಲಿ ಶಾಂತಿ ಮತ್ತು ಭದ್ರತೆ ಬಲವಾಗಿರಬೇಕಾದರೆ, ಭದ್ರತಾ ವ್ಯವಸ್ಥೆಯನ್ನು ತಕ್ಷಣ ಬಲಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಇದರತ್ತ ಗಂಭೀರವಾಗಿ ಗಮನ ಹರಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.
ವರದಿ : ರವಿ ಬುರನೋಳ್




