Ad imageAd image

ಸುಲಭ ಗೆಲುವಿನೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದ ಮುಂಬೈ ಇಂಡಿಯನ್ಸ್

Bharath Vaibhav
ಸುಲಭ ಗೆಲುವಿನೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದ ಮುಂಬೈ ಇಂಡಿಯನ್ಸ್
WhatsApp Group Join Now
Telegram Group Join Now

ಹೈದರಾಬಾದ್: ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ 41 ನೇ ಲೀಗ್ ಪಂದ್ಯದಲ್ಲಿ ಸನ್ ರೈಜರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ ಗಳ ಸುಲಭ ಗೆಲುವು ಪಡೆಯುವುದರೊಂದಿಗೆ ಪಂದ್ಯಾವಳಿಯಲ್ಲಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ರೇಸ್ ನಲ್ಲಿ ಉಳಿದುಕೊಂಡಿದೆ.

ಇಲ್ಲಿನ ರಾಜೀವ ಗಾಂಧಿ  ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಜರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 143 ರನ್ ಗಳನ್ನು ಮಾತ್ರ ಗಳಿಸಿತು. ಸುಲಭದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 15.4 ಓವರುಗಳಲ್ಲಿ 3 ವಿಕೆಟ್ ಗೆ 146 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಈ ಗೆಲುವಿನೊಂದಿಗೆ ತಾನಾಡಿರುವ 9 ಪಂದ್ಯಗಳಿಂದ 5 ರಲ್ಲಿ ಗೆದ್ದು 4 ರಲ್ಲಿ ಸೋತು 10 ಪಾಯಿಂಟ್ ಗಳನ್ನು ಕಲೆ ಹಾಕಿರುವ ಹಾರ್ಧಿಕ ಪಾಂಡ್ಯಾ ಬಳಗ ರನ್ ಸರಾಸರಿ ಉತ್ತಮ ಪಡಿಸಿಕೊಂಡಿದ್ದರಿಂದ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಭಡ್ತಿ ಪಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನ ಹಾಗೂ ಪಂಜಾಬ್ ಕಿಂಗ್ಸ್ 5 ನೇ ಸ್ಥಾನದಲ್ಲಿ ಉಳಿದುಕೊಂಡವು.

ಸ್ಕೋರ್ ವಿವರ:

ಸನ್ ರೈಜರ್ಸ್ ಹೈದರಾಬಾದ್ 20 ಓವರುಗಳಲ್ಲಿ 8 ವಿಕೆಟ್ ಗೆ 143

ಕ್ಲಾಸೆನ್ 71 ( 44 ಎಸೆತ, 9 ಬೌಂಡರಿ 2 ಸಿಕ್ಸರ್), ಅಭಿನವ ಮನೋಹರ 43 ( 37 ಎಸೆತ, 2 ಬೌಂಡರಿ, 3 ಸಿಕ್ಸರ್)

ಟ್ರೆಂಟ್ ಬೋಲ್ಟ್ 26 ಕ್ಕೆ4, ಚಹರ 12 ಕ್ಕೆ 2)

ಮುಂಬೈ ಇಂಡಿಯನ್ಸ್ 15.4 ಓವರುಗಳಲ್ಲಿ 3 ವಿಕೆಟ್ ಗೆ 146

ರೋಹಿತ್ ಶರ್ಮಾ 70 ( 46 ಎಸೆತ, 8 ಬೌಂಡರಿ, 3 ಸಿಕ್ಸರ್), ಸೂರ್ಯಕುಮಾರ ಯಾದವ 40 ( 19 ಎಸೆತ, 5 ಬೌಂಡರಿ, 2 ಸಿಕ್ಸರ್ )

ಪಂದ್ಯ ಶ್ರೇಷ್ಠ: ಟ್ರೆಂಟ್ ಬೋಲ್ಟ್- 26 ಕ್ಕೆ4  

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!