ರಾಯಚೂರು: ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾಸದೋಡ್ಡಿ ಗ್ರಾಮದಲ್ಲಿ ಒಂದು ವರ್ಷದ ಹಿಂದೆ ಕಟ್ಟಡ ನಿರ್ಮಾಣ ಮಾಡಿದ್ದು ಈ ಭವನ ಉದ್ಘಾಟನೆಯನ್ನು ಕನಕ ಜಯಂತಿ ಎಂದು ಮಾಡಬೇಕೆಂದು ನಿರ್ಧರಿಸಿದ್ದು ಅಂದು ಬಹಳಷ್ಟು ಜನಸಮೂಹ ಸೇರಿದ್ದರಿಂದ ಒಂದು ಸಾಕಷ್ಟು ಸಚಿವರೂ ಶಾಸಕರು ಉಸ್ತುವಾರಿ ಸಚಿವರುಗಳು ಬಂದಿದ್ದರಿಂದ ಸಾಕಷ್ಟು ಜನಸಾಮೋಹ ಸೇರಿತ್ತು ಹಾಗಾಗಿ ಅಂದು ಉದ್ಘಾಟನೆ ಮಾಡಲು ಆಗಿರಲಿಲ್ಲ ಇಂದು ಉತ್ತಮ ವಾಲ್ಮೀಕಿ ಭವನ ಉದ್ಘಾಟನೆ ಮಾಡಲಾಯಿತು.

ಮತ್ತು ಮಾಸ್ ದೊಡ್ಡಿ ಗ್ರಾಮದಲ್ಲಿ ವರ್ಗಾವಣೆ ಮನೆಗಳಿಗೆ ನಿವೇಶನ ಮತ್ತು ಸ್ಥಳ ಹಕ್ಕು ಪತ್ರಗಳನ್ನು ತಾಸಿಲ್ದಾರವರಿಂದ ತಮಗೆ ಹಕ್ಕು ಪತ್ರಗಳು ವಿತರಿಸಿಕೊಡುತ್ತೇನೆಂದು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ರವರು ಸಭೆಯಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರು,ಊರಿನ ಹಿರಿಯ ಮುಖಂಡರು ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರುಗಳು, ನಾಮನಿರ್ದೆಶನ ಸದಸ್ಯರುಗಳು ಗ್ರಾ. ಪಂ ಸರ್ವ ಸದಸ್ಯರುಗಳು,ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ




