ರೋಣ: ಸೇವಾನಿರತ ವೃತ್ತಿಯಲ್ಲಿ ನಿವೃತ್ತಿ ಅನಿವಾರ್ಯ ಆದರೆ ಕರ್ತವ್ಯದಲ್ಲಿ ಶಿಸ್ತು ಶೃದ್ದೆ ನಿಷ್ಠೆ ಪ್ರಮಾಣಿಕತೆ ಸಮಯ ಪಾಲನೆ ಹೊಂದಿರುವ ವ್ಯಕ್ತಿಗೆ ಇಡೀ ಮನುಕುಲವೇ ಗೌರವ ನೀಡುತ್ತದೆ.ಎನ್ನುವುದಕ್ಕೆ ಇಂದಿನ ಸಮಾರಂಭ ಸಾಕ್ಷಿಯಾಗಿದೆ ಎಂದು ತಾಲೂಕ ದಂಡಾಧಿಕಾರಿ ನಾಗರಾಜ್ ಕೆ ಹೇಳಿದರು.

ಕ್ಷೇತ್ರ ಶಿಕ್ಷಣ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ವಯೋ ನಿವೃತ್ತಿ ಹೊಂದಿರುವ ರುದ್ರಪ್ಪ ಹುರಳಿ ಇವರಿಗೆ ನಗರದ ಗುರು ಭವನದಲ್ಲಿ ತಾಲೂಕ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿರಂತರವಾದ ಶ್ರಮ ಶಿಸ್ತು ಸಮಯ ಪಾಲನೆಯಿಂದ ಎತ್ತರದ ಗುರಿ ಸಾಧಿಸಲು ಸಾಧ್ಯ ಎನ್ನುವದಕ್ಕೆ ರುದ್ರಪ್ಪ ಹುರುಳಿ ಅವರ ಬದುಕು ಸಾಧನೆಗೆ ಜೀವಂತ ಸಾಕ್ಷಿಯಾಗಿದೆ.
ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಬದುಕು ಆರಂಭಿಸಿದ ಅವರು ಮುರಾರ್ಜಿ ಇಂದಿರಾ ವಸತಿ ಶಾಲೆಗಳಂತ ಇತರ ಶಾಲೆಗಳಲ್ಲಿ ಪ್ರಿನ್ಸಿಪಾಲರಾಗಿ ಅನೇಕ ಒತ್ತಡಗಳ ನಡುವೆ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರು ಮಾಡುವಲ್ಲಿ ಯಶಸ್ವಿಯಾಗಿ ಸಮಾಜಕ್ಕೆ ನೀಡಿದ ಕೀರ್ತಿ ರುದ್ರಪ್ಪ ಹುರುಳಿ ಅವರಿಗೆ ಸಲ್ಲುತ್ತದೆ.
ಅವರ ಮೃದು ಮಾತು ಸದಾ ಹಸನ್ಮುಖಿ ಸಮಾಧಾನ ಸ್ವಭಾವವೇ ರಾಜ್ಯ ವ್ಯಾಪಿ ಅನೇಕ ಸಮಿತ್ರರನ್ನು ಸಂಪಾದಿಸಲು ಕಾರಣವಾಗಿದೆ.
ಅವರ ನಿವೃತ್ತಿ ಬದುಕು ಆರೋಗ್ಯ ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದರು.
ಸೇವಾ ನಿವೃತ್ತಿ ಹೊಂದಿದ ರುದ್ರಪ್ಪ ಹುರುಳಿ ದಂಪತಿಯನ್ನು ತಾಲೂಕ ಆಡಳಿತ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಅನೇಕರು ಸನ್ಮಾನಿಸಿದರು ಈ ವೇಳೆ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ತಾಲೂಕ ಘಟಕದ ಅಧ್ಯಕ್ಷ ಎಸ್. ಜಿ. ದಾನಪ್ಪಗೌಡರ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೖ. ಡಿ. ಗಾಣಿಗೇರ. ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ದಾನರಡ್ಡಿ.
ಬಿ ಆರ್ ಸಿ ಎಂ. ಎ. ಫಣಿಬಂದ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್. ಎಲ್. ನಾಯಕರ.
ಮಹೇಶ್ ಕುರಿ. ಬಿ.ಎಂ. ಖ್ಯಾತನಗೌಡರ. ಹಾಲನಗೌಡ ಪಾಟೀಲ. ಸೇರಿದಂತೆ ಇತರರು ಇದ್ದರು.




