Ad imageAd image

ಸರ್ಕಾರಿ ಆಸ್ಪತ್ರೆ ಕಸದ ತೊಟ್ಟೆ

Bharath Vaibhav
ಸರ್ಕಾರಿ ಆಸ್ಪತ್ರೆ ಕಸದ ತೊಟ್ಟೆ
WhatsApp Group Join Now
Telegram Group Join Now

ಚಡಚಣ :ತಾಲೂಕಿನ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಉಮರಾಜ ಗ್ರಾಮದ ಸರ್ಕಾರಿ ಆಸ್ಪತ್ರೆ ಒಳಗೆ ಮತ್ತು ಆವರಣದ ಹೊರಗೆ ಎಲ್ಲ ಕಸದ ತೊಟ್ಟಿಯಾಗಿ ಕಾಣುತ್ತಿದೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಈ ರೀತಿ ಆದರೆ ರೋಗ ರುಜುನಗಳು ಹೆಚ್ಚಾಗುತ್ತವೆ ಮತ್ತು ರೋಗಿಗಳು ಆಸ್ಪತ್ರೆಗೆ ಬಂದರೆ ಇಲ್ಲಿಯ ಸಿಬ್ಬಂದಿ ಕೆಲವು ಸಮಯದಲ್ಲಿ ಕೂಡ ಯಾರು ಇರುವುದಿಲ್ಲ ಹೀಗಾದರೆ ಇಲ್ಲಿ ಜನರ ಗೋಳು ಕೇಳುವರು ಯಾರು ಇದಕ್ಕೆ ಕೊನೆಯ ಇಲ್ಲವೇ ಸರ್ಕಾರ ಮತ್ತು ಚಡಚಣ ತಾಲೂಕು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ ಹಾಗೆ ಕಾಣುತ್ತಿದೆ ಇಲ್ಲಿ ವೈದ್ಯಧಿಕಾರಿಗಳು ಮುತ್ತು ಸಿಬ್ಬಂದಿಗಳು ಸರಿಯಾಗಿ ಯಾರೂ ಕೆಲಸದ ಮೇಲೆ ಬರುವುದಿಲ್ಲವೆಂದು ಸ್ಥಳೀಯ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಆಸ್ಪತ್ರೆ ಒಳಗೆ ಎಲ್ಲಾ ವಾರ್ಡ್ ಗಳಲ್ಲಿ ಕಸದ ತಿಪ್ಪಿ ಹಾಗೆ ಕಾಣುತ್ತಿದೆ ಹೀಗಿದ್ದರೂ ಕೂಡ ವೈದ್ಯಾಧಿಕಾರಿಗಳು ಗಮನಹರಿಸುತ್ತಿಲ್ಲ ಬಂದ ರೋಗಿಗಳಿಗೆ ವ್ಯವಸ್ಥೆವಿಲ್ಲ ಅಕ್ಕ ಪಕ್ಕದ ಹಳ್ಳಿಯ ಜನರು ತುಂಬಾ ಗೋಳಾಟವನ್ನು ಪಡುತ್ತಿದ್ದಾರೆ ಇದೆ ರೀತಿ ರೇವತಗಾವ ಆಸ್ಪತ್ರೆ ಯಲ್ಲಿ ಕೂಡಾ ಸಮಸ್ಯ ಇದೆ ತುಂಬಾ ದಿನಗಳಿಂದ ಆಸ್ಪತ್ರೆಗೆ ಬೀಗ ಜಡದಿದೆ ಇತ್ತ ಕಡೆ ಸಂಬಂಧಪಟ್ಟ ಅಧಿಕಾರಿಗಳು ಸ್ವಲ್ಪ ಗಮನ ಹರಿಸಿ ಇಲ್ಲಿಯ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಜನರು ಮಾಧ್ಯಮದವರು ಮುಂದೆ ಅವರ ನೋವನ್ನು ತೋಡಿಕೊಂಡಿದ್ದಾರೆ.

ವರದಿ: ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!