Ad imageAd image

ಬಸವೇಶ್ವರ ಜಯಂತಿ ಅದ್ದೂರಿಯಾಗಿ ನೆರವೇರಿತು.

Bharath Vaibhav
ಬಸವೇಶ್ವರ ಜಯಂತಿ ಅದ್ದೂರಿಯಾಗಿ ನೆರವೇರಿತು.
WhatsApp Group Join Now
Telegram Group Join Now

ಚಡಚಣ :  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಸವೇಶ್ವರ ಜಯಂತಿ ಅದ್ದೂರಿಯಾಗಿ ನಡೆಸಲಾಯಿತು ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ ಮಾದರಸ, ತಾಯಿ ಮಾದಲಂಬಿಕೆ ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು.

ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಅವರು ಅನುಭವ ಮಂಟಪ ಅಥವಾ, “ಆಧ್ಯಾತ್ಮಿಕ ಅನುಭವದ ಭವನ, ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು ಎಂದು ಶ್ರೀ ಷಡಕ್ಷರಿ ಮಹಾಸ್ವಾಮಿಗಳು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸಂಜಯ ಇಂಗಳೆ, ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಪೂಜಾರಿ, ಕಾಂತುಗೌಡ ಪಾಟೀಲ, ಪಂಚಾಯತಿಯ ಅಧ್ಯಕ್ಷರು ಮಲ್ಲಿಕಾರ್ಜುನ ದೋತ್ರೆ, ಮತ್ತು ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರು ಊರಿನ ಗಣ್ಯ ವ್ಯಕ್ತಿಗಳು ಎಲ್ಲ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನೆರವೇರಿಸಿದರು.

ವರದಿ : ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!